​ಕೋಳಿ ಅಂಕ: ಮೂವರ ಬಂಧನ

Update: 2017-09-18 16:06 GMT

ಕಾರ್ಕಳ, ಸೆ.18: ಇರ್ವತ್ತೂರು ಗ್ರಾಮದ ತಿಮ್ಮರೊಟ್ಟು ಎಂಬಲ್ಲಿ ಸೆ.17 ರಂದು ಸಂಜೆ ವೇಳೆ ಕೋಳಿ ಅಂಕ ನಡೆಸುತ್ತಿದ್ದ ಮೂವರನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಮಿಯಾರಿನ ಚಂದ್ರಶೇಖರ್(34), ಗಣೇಶ(24), ಇರ್ವತ್ತೂರಿನ ಹರೀಶ್ (32) ಎಂಬವರು ಬಂಧಿತ ಆರೋಪಿಗಳು. ಇವರಿಂದ 1300ರೂ. ನಗದು, 3 ಬಾಳುಕತ್ತಿ, 3 ಕೋಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News