ತೆಂಕನಿಡಿಯೂರು ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ

Update: 2017-09-18 16:51 GMT

ಉಡುಪಿ, ಸೆ.18:ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ ಹಾಗೂ ಸಾಂಸ್ಕೃತಿ ಸಂಭ್ರಮ ಇತ್ತೀಚೆಗೆ ನಡೆಯಿತು.

ಮೂಡಬಿದಿರೆಯ ಖ್ಯಾತ ರಂಗಕಲಾವಿದ ಪ್ರೇಮಾನಂದ ಪ್ರತಿಭಾ ದಿನಾಚರಣೆಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿದರು.

ಈ ಸಂದರ್ಭ ದಲ್ಲಿ ಮಾತನಾಡಿದ ಅವರು, ಭಾವನೆಗಳ ಅಭಿವ್ಯಕ್ತಿಗೆ ಪೂರಕವಾಗಿ ಸಾಂಸ್ಕೃತಿಕ ಚಟುವಟುಕೆಗಳು ಜನಜೀವನದಲ್ಲಿ ಹಾಸುಹೊಕ್ಕಾಗಿವೆ. ಮನಸ್ಸಿಗೆ ಮುದ ನೀಡುವ ಸೃಜನಶೀಲತೆಗೆ ಒತ್ತು ನೀಡುವ ಹಾಡುಕುಣಿತಗಳು ವಿದ್ಯಾರ್ಥಿಗಳಿಗೆ ಜೀವನ ಪ್ರೇರಣೆಯನ್ನು ನೀಡುತ್ತವೆ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಎಸ್. ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೋಹನ ಕಡಬ ಹಿರಿಯಡಕ ಹಾಗೂ ರಾಜಶ್ರೀ ಪ್ರಸನ್ನ ಉಡುಪಿ ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಸಾಂಸ್ಕೃತಿಕ ಸಂಚಾಲಕ ಉದಯಶೆಟ್ಟಿ ಕೆ. ಹಾಗೂ ಡಾ.ವೆಂಕಟೇಶ್ ಹೆಚ್.ಕೆ. ಕಾರ್ಯಕ್ರಮ ಸಂಘಟಿಸಿ ದರು. ಜಗದೀಶ್ ಸ್ವಾಗತಿಸಿದರೆ, ಮನೀಶ್ ವಂದಿಸಿದರು. ವಿದ್ಯಾರ್ಥಿನಿ ಶಮಿತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News