​ವಾಹನ ಢಿಕ್ಕಿ: ಬಸ್ ನಿರ್ವಾಹಕ ಮೃತ್ಯು

Update: 2017-09-18 17:14 GMT

ಕೋಟ, ಸೆ.18: ಕೋಟ ಮೂರುಕೈ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಸಂಜೆ 4ಗಂಟೆ ಸುಮಾರಿಗೆ ಇಕೋ ವಾಹನ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಗುಲ್ವಾಡಿ ನಿವಾಸಿ ಇಸ್ಮಾಯಿಲ್(45) ಎಂದು ಗುರುತಿಸಲಾಗಿದೆ.

ಎಪಿಎಂ ಬಸ್‌ನ ನಿವಾರ್ಹಕರಾಗಿರುವ ಇಸ್ಮಾಯಿಲ್ ರಸ್ತೆ ದಾಟುತ್ತಿದ್ದಾಗ ಉಡುಪಿಯಿಂದ ಕುಂದಾಪುರ ಕಡೆ ಹೋಗುತ್ತಿದ್ದ ಇಕೋ ವಾಹನ ಢಿಕ್ಕಿ ಹೊಡೆ ಯಿತು. ಇದರಿಂದ ಗಂಭೀರವಾಗಿ ಗಾಯಗೊಂಡ ಇಸ್ಮಾಯಿಲ್ ಸ್ಥಳದಲ್ಲೇ ಮೃತಪಟ್ಟರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News