ಯುನಿವೆಫ್ ನಿಂದ ಉಳ್ಳಾಲದಲ್ಲಿ 'ಏಕದಿನ ಇಸ್ಲಾಮಿ ಶಿಬಿರ'

Update: 2017-09-19 11:57 GMT

ಮಂಗಳೂರು, ಸೆ. 19: ಯುನಿವೆಫ್ ಕರ್ನಾಟಕ ಉಳ್ಳಾಲ ಶಾಖೆಯ ವತಿಯಿಂದ 'ಏಕದಿನ ಇಸ್ಲಾಮೀ ಶಿಬಿರ'ವು ಉಳ್ಳಾಲದ ಮುಕ್ಕಚ್ಚೇರಿಯ ಬಿರ್ಲಾ ಕಂಪೌಂಡ್ ನಲ್ಲಿರುವ ನಿಮ್ರ ಮಸೀದಿಯಲ್ಲಿ ಇತ್ತೀಚೆಗೆ ನಡೆಯಿತು.

ಶಿಬಿರದಲ್ಲಿ 'ಭಾರತದಲ್ಲಿ ಇಸ್ಲಾಮೀ ಶರೀಅತ್- ಸಾಧಕ ಮತ್ತು ಬಾಧಕಗಳು' ಎಂಬ ವಿಷಯದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ,  'ಯುವ ಸಮೂಹ ಮತ್ತು ಅದರ ಹೊಣೆಗಾರಿಕೆಗಳು' ಎಂಬ ವಿಷಯದಲ್ಲಿ ಮೌಲಾನಾ ಇಜಾಝುದ್ದೀನ್ ಉಮರಿ ಹಾಗೂ 'ಶಾಬಾನು ಪ್ರಕರಣ, ಬಾಬರಿ ಮಸೀದಿ, ತ್ರಿವಳಿ ತಲಾಖ್ ಹಾಗೂ ಸಮಾನ ಸಿವಿಲ್ ಕೋಡ್' ಎಂಬ ವಿಷಯದಲ್ಲಿ ಅಡ್ವೊಕೇಟ್ ಮುಹಮ್ಮದ್ ಹನೀಫ್ ಮಾತನಾಡಿದರು.

'ಪ್ರಸಕ್ತ ಪರಿಸ್ಥಿತಿಯನ್ನು ಎದುರಿಸುವುದು ಹೇಗೆ?' ಎಂಬ ವಿಷಯದಲ್ಲಿ ನಡೆದ ಚಾವಡಿ ಚರ್ಚೆಯಲ್ಲಿ ಕೆರಿಯರ್ ಗೈಡೆನ್ಸ್ & ಇಂಫಾರ್ಮೇಶನ್ ಸೆಂಟರ್ ನ ಉಮರ್ ಯು.ಎಚ್., ಸಾಮಾಜಿಕ ಕಾರ್ಯಕರ್ತ ಜೆ.ಮುಹಮ್ಮದ್ ಉಳ್ಳಾಲ್, ರಕ್ಷಿದಿ ಎಸ್ಟೇಟ್ ನ ಇಸ್ಮಾಯೀಲ್ ರಕ್ಷಿದಿ, ಯುನಿವೆಫ್ ಕಾರ್ಯದರ್ಶಿ ಯು ಕೆ ಖಾಲಿದ್ ಹಾಗೂ ರಾಜ್ಯ ಸಲಹಾ ಸಮಿತಿ ಸದಸ್ಯ ಅಡ್ವೊಕೇಟ್ ಸಿರಾಜುದ್ದೀನ್ ಭಾಗವಹಿಸಿದ್ದರು.

ಸಮಾರೋಪ ಭಾಷಣಗೈದ ರಫೀಉದ್ದೀನ್ ಕುದ್ರೋಳಿ 'ಯುನಿವೆಫ್ - ಕರ್ನಾಟಕದ ಸಂಸ್ಕೃತಿಯ ಮೆಟ್ಟಿಲು, ಹೊಸ ತಲೆಮಾರು - ಇಸ್ಲಾಮಿನ ಭವಿಷ್ಯ' ಎಂಬ ವಿಷಯದಲ್ಲಿ ಮಾತನಾಡಿದರು.

ಜಿಲ್ಲಾಧ್ಯಕ್ಷ ಮುಹಮ್ಮದ್ ಸೈಫುದ್ದೀನ್ ದರ್ಸೆ ಕುರ್ ಆನ್ ಪಠಿಸಿದರು. ಸಂಚಾಲಕ ಬಿ.ಎಂ. ಬದ್ರುದ್ದೀನ್ ಸ್ವಾಗತಿಸಿದರು, ಕಾರ್ಯಕ್ರಮ ನಿರೂಪಿಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News