ಮೊಂಟೆಪದವು ಪ್ರದೇಶಕ್ಕೆ ಸರ್ಕಾರಿ ಬಸ್‍ಗೆ ಒತ್ತಾಯಿಸಿ ಮನವಿ

Update: 2017-09-20 14:34 GMT

ಕೊಣಾಜೆ,ಸೆ.20: ಮಂಗಳೂರಿನಿಂದ ಮೊಂಟೆಪದವು ಮೂಲಕ ಮುಡಿಪು ವರೆಗೆ ಸರ್ಕಾರಿ ಬಸ್‍ಗೆ ಒತ್ತಾಯಿಸಿ ಪ್ರದೇಶಿಕ ಸಾರಿಗೆ ಅಧಿಕಾರಿಯವರಿಗೆ ಡಿವೈಎಫ್‍ಐ ನೇತೃತ್ವದಲ್ಲಿ ಬುಧವಾರ ಮನವಿ ಸಲ್ಲಿಸಲಾಯಿತು.

 ಮೊಂಟೆಪದವು ಪರಿಸರದಲ್ಲಿ ಬಸ್‍ನ ಸಮಸೈಯಿಂದಾಗಿ ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರು ಸಮಸ್ಯೆಯನ್ನು ಎದುರಿಸುತ್ತಿದ್ದು, ಈಗಾಗಲೇ ಓಡಾಡುತ್ತಿರುವ ಖಾಸಗಿ ಬಸ್‍ಗಳು ನಿಗದಿ ಹೆಚ್ಚಾಗಿ ಜನವನ್ನು ಹಾಕಿ ಸಂಚರಿಸುವುದರಿಂದಾಗಿ ಹಲವು ಸಂಕಷ್ಟಗಳು ಎದುರಾಗಿದ್ದವು. ಈ ಎಲ್ಲಾ ತೊಂದರೆಗಳಿಗೆ ಪರಿಹಾರವನ್ನು ಒದಗಿಸಲು ಸರ್ಕಾರಿ ಬಸ್‍ಬೇಕೆಂದು ಒತ್ತಾಯಿಸಿ ಎಸ್‍ಎಫ್‍ಐ ನೇತೃತ್ವದಲ್ಲಿ ಪ್ರತಿಭಟನೆಯನ್ನು ಕೂಡಾ ಮಾಡಲಾಗಿತ್ತು. ಅಲ್ಲದೆ ಡಿವೈಎಫ್‍ಐ ನೇತೃತ್ವದಲ್ಲಿ ಆರ್‍ಟಿಒ ಕಚೇರಿ ಎದುರು ಪ್ರತಿಭಟನೆಯನ್ನು ನಡೆಸಿ ಸರ್ಕಾರಿ ಬಸ್‍ಗಾಗಿ ಒತ್ತಾಯಿಸಲಾಗಿತ್ತು. ನಂತರ ವಿವಿಧ ಕಡೆಗಳಿಗೆ ಸರ್ಕಾರಿ ಬಸ್‍ಗಳನ್ನು ಹಾಕಲಾಗಿದ್ದರೂ ಖಾಸಗಿ ಬಸ್‍ಗಳ ಲಾಬಿ ಹೆಚ್ಚಾಗಿರುವ ಮೊಂಟೆಪದವು ಭಾಗಕ್ಕೆ ಬಸ್ ಬರದಂತೆ ತಡೆಯೊಡ್ಡುತ್ತಿದ್ದಾರೆ.

ಇದರಿಂದ ಆಕ್ರೋಶಗೊಂಡಿರುವ ನಾಗರಿಕರು ಡಿವೈಎಫ್‍ಐ ನೇತೃತ್ವದಲ್ಲಿ ಬುಧವಾರ ಆರ್‍ಟಿಓ ಅಧಿಕಾರಿಗಳಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್, ಡಿವೈಎಫ್‍ಐ ಉಳ್ಳಾಲ ವಲಯ ಅಧ್ಯಕ್ಷರಾದ ಜೀವನ್‍ರಾಜ್ ಕುತ್ತಾರ್, ಕಾರ್ಯದರ್ಶಿ ರಝಾಕ್ ಮೊಂಟೆಪದವು, ಸ್ಥಳೀಯರಾದ ಅಶ್ರಫ್, ಮುಖಂಡರಾದ ವಿಶ್ವನಾಥ ಮೊಂಟೆಪದವು, ಶಂಸುದ್ದೀನ್, ಜಾಫರ್, ಮಹರೂಫ್ ಮೊದಲಾದವರು ಉಪಸ್ಥಿತರಿದ್ದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News