ಸೆ.22 : ಸಣ್ಣ ವ್ಯಾಪಾರದ ಬಗ್ಗೆ ಬೆಳ್ತಂಗಡಿಯಲ್ಲಿ ಉಚಿತ ತರಬೇತಿ

Update: 2017-09-20 16:07 GMT

ಮಂಗಳೂರು: ಸೆ 20, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಸಣ್ಣ ವ್ಯಾಪಾರದ ಬಗ್ಗೆ ಉಚಿತ ತರಬೇತಿ ಕಾರ್ಯಕ್ರಮವು ಬೆಳ್ತಂಗಡಿ ಸಂತೆಕಟ್ಟೆಯಲ್ಲಿರುವ ಸುವರ್ಣ ಆರ್ಕೇಡ್‍ನಲ್ಲಿ ಸಪ್ಟಂಬರ್ 22 ಶುಕ್ರವಾರ ಅಪರಾಹ್ನ 2.30 ರಿಂದ 6 ಗಂಟೆಯ ತನಕ ನಡೆಯಲಿದೆ. ಫುಟ್‍ಪಾತ್, ಮಾರ್ಕೆಟ್, ಬಸ್ ನಿಲ್ದಾಣ, ರೈಲ್ವೇ ಸ್ಟೇಷನ್, ಸಂತೆ, ಜಾತ್ರೆ, ಉರೂಸ್, ಮಸೀದಿಯ ಹೊರಗೆ ಹೀಗೆ ಜನ ಸೇರುವ ಜಾಗದಲ್ಲಿ ಕಡಿಮೆ ಬಂಡವಾಳ ಹಾಕಿ ಮಾಡಬಹುದಾದ ಸಣ್ಣ ವ್ಯಾಪಾರದ ಬಗ್ಗೆ ಉಚಿತ ತರಬೇತಿಯನ್ನು ನಡೆಸುತ್ತಿದ್ದೇವೆ.

ಈ ಕಾರ್ಯಕ್ರಮದಲ್ಲಿ ವ್ಯಾಪಾರ ಮಾಡಬಹುದಾದ ವಸ್ತುಗಳನ್ನು ತೋರಿಸಲಾಗುವುದು. ವಸ್ತುಗಳು ಹೋಲ್ ಸೇಲ್ ದರದಲ್ಲಿ ಸಿಗುವ ಸ್ಥಳ, ವ್ಯಾಪಾರದಲ್ಲಿ ಸಿಗಬಹುದಾದ ಅಂದಾಜು ಲಾಭ ಮುಂತಾದ ವಿಷಯಗಳಲ್ಲಿ ಅನುಭವಿ ತರಬೇತುದಾರರು ತರಬೇತಿ ನೀಡಲಿದ್ದಾರೆ.  ಈ ತರಬೇತಿಯು ಸಣ್ಣ ವ್ಯಾಪಾರಸಕ್ತರಿಗೆ ಬಹಳಷ್ಟು ಪ್ರಯೋಜನವಾಗಲಿದ್ದು ಆಸಕ್ತರು ಇದರ ಪ್ರಯೋಜನ ಪಡೆಯುವಂತೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಿ ಅಬ್ದುಲ್ ಹಮೀದ್ ಕಣ್ಣೂರು ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ- 7760508664, 9972283365

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News