ಬೆಂಗಳೂರು-ಮಂಗಳೂರು-ಕಾರವಾರ ರಾತ್ರಿ ರೈಲಿನ ಮಾರ್ಗ ಬದಲಾವಣೆಗೆ ರೈಲ್ವೆ ಯಾತ್ರಿ ಸಂಘ ಮನವಿ

Update: 2017-09-20 16:50 GMT

 ಉಡುಪಿ, ಸೆ.20: ರೈಲು ನಂಬರ್ 16523- ಬೆಂಗಳೂರು ಸಿಟಿ ಜಂಕ್ಟನ್, ಮೈಸೂರು, ಹಾಸನ, ಮಂಗಳೂರು, ಕಾರವಾರ ರಾತ್ರಿ ರೈಲನ್ನು ಈಗಿರುವ ಮಾರ್ಗದ ಬದಲು ಬೆಂಗಳೂರು, ಯಶವಂತಪುರ, ಕುಣಿಗಲ್ ಹಾಗೂ ಹಾಸನ ಮಾರ್ಗವಾಗಿ ಓಡಿಸುವಂತೆ ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್. ಡಯಾಸ್ ಮನವಿ ಮಾಡಿದ್ದಾರೆ.

ಈಗ ಇರುವ ಮಾರ್ಗದಲ್ಲಿ ಬೆಂಗಳೂರು ಮೈಸೂರು ಹಾಸನದ ದೂರವು 287 ಕಿಮೀ ಆಗುತ್ತಿದ್ದು, ಬೆಂಗಳೂರು ಯಶವಂತಪುರ ಕುಣಿಗಲ್ ಹಾಸನ ದೂರವು 127 ಕಿಮೀ ಆಗುತ್ತದೆ. ಇದರಿಂದ 127 ಕಿಮೀ ಕಡಿತವಾಗುತ್ತದೆ. ಈ ರೈಲನ್ನು ಹೊಸ ಮಾರ್ಗದಲ್ಲಿ ಓಡಿಸಬೇಕೆಂದು ಉಡುಪಿಯ ಜೈ ಭಾರ್ಗವ ಬಳಗ ಕೇಂದ್ರ ರೈಲು ಸಚಿವರಿಗೆ ಮನವಿ ಮಾಡಿರುವುದನ್ನು ರೈಲ್ವೆ ಯಾತ್ರಿ ಸಂಘ ಸ್ವಾಗತಿಸುವುದು ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉಡುಪಿ ರೈಲ್ವೆ ಯಾತ್ರಿಕರ ಸಂಘ ಈಗಾಗಲೇ ತನ್ನ ಪ್ರಯತ್ನ ಪ್ರಾರಂಭಿಸಿದ್ದು ವಿಷಯವು ನೈಋತ್ಯ ರೈಲ್ವೆಯ ಪ್ರಸ್ತಾವನೆಯಲ್ಲಿದೆ. ಆದರೆ ಮೈಸೂರು, ಮಂಡ್ಯಗಳಲ್ಲಿ ನೆಲೆಸಿರುವ ಕಾರವಾರ ಉಡುಪಿ ಮಂಗಳೂರು ಭಾಗದ ಹಲವಾರು ಮಂದಿ ಈ ರೈಲು ಮಾರ್ಗದ ಬದಲಾವಣೆ ಮಾಡಬಾರದೆಂದು ಮನವಿ ಮಾಡುತಿದ್ದು, ಅದಕ್ಕೆ ಪರಿಹಾರವಾಗಿ ಕಿರು ಬದಲಾವಣೆಯೊಂದಿಗೆ ಹೊಸ ಮಾರ್ಗದಲ್ಲಿ ರೈಲನ್ನು ಓಡಿಸಲು ಮನವಿ ಸಲ್ಲಿಸಲು ಉಡುಪಿ ರೈಲ್ವೆ ಯಾತ್ರಿಕರ ಸಂಘವು ನಿರ್ಧರಿಸಿದೆ ಎಂದು ಡಯಾಸ್ ತಿಳಿಸಿದ್ದಾರೆ.
 ಈ ರೈಲನ್ನು ಮೈಸೂರಿನಿಂದ ಪ್ರಾರಂಭಿಸಿ ಬೆಂಗಳೂರು ಯಶವಂತಪುರ ಕುಣಿಗಲ್ ಹಾಸನಕ್ಕಾಗಿ ಓಡಿಸಲು ಪ್ರಸ್ತಾವನೆಯೊಂದಿಗೆ ಅದಕ್ಕಾಗಿ ವೇಳಾಪಟ್ಟಿ ಯನ್ನು ತಯಾರಿಸಿದೆ. ಅದರ ವಿವರ ಹೀಗಿದೆ. ಮೈಸೂರಿನಿಂದ ಸಂಜೆ 5:40ಕ್ಕೆ ಹೊರಟು ಬೆಂಗಳೂರಿಗೆ ರಾತ್ರಿ 11:34ಕ್ಕೆ ತಲುಪಿ, ಹಾಸನಕ್ಕೆ ರಾತ್ರಿ 12:18ಕ್ಕೆ ಮಂಗಳೂರಿಗೆ ಬೆಳಿಗ್ಗೆ 6:19ಕ್ಕೆ ಕಾರವಾರಕ್ಕೆ 11:45ಕ್ಕೆ ತಲುಪಬಹುದಾಗಿದೆ.

ಹಾಗೆಯೇ ಕಾರವಾರದಿಂದ ಅಪರಾಹ್ನ 3:00ಕ್ಕೆ ಪ್ರಾರಂಭಿಸಿ ಮಂಗಳೂರಿಗೆ ರಾತ್ರಿ 8:40ಕ್ಕೆ ಹಾಸನಕ್ಕೆ 2:25ಕ್ಕೆ ಬೆಂಗಳೂರಿಗೆ ಬೆಳಿಗ್ಗೆ 5:30ಕ್ಕೆ ಮುಟ್ಟಿ ಅಲ್ಲಿಂದ ಬೆಳಿಗ್ಗೆ 8:35ಕ್ಕೆ ಮೈಸೂರು ತಲುಪಬಹುದಾಗಿದೆ. ಈ ರೈಲನ್ನು ಮೈಸೂರಿನಿಂದ ಪ್ರಾರಂಭಿಸಿ ಬೆಂಗಳೂರು ಯಶವಂತಪುರ ಕುಣಿಗಲ್ ಹಾಸನಕ್ಕಾಗಿ ಓಡಿಸಲು ಪ್ರಸ್ತಾವನೆಯೊಂದಿಗೆ ಅದಕ್ಕಾಗಿ ವೇಳಾಪಟ್ಟಿ ಯನ್ನು ತಯಾರಿಸಿದೆ. ಅದರ ವಿವರ ಹೀಗಿದೆ. ಮೈಸೂರಿನಿಂದ ಸಂಜೆ 5:40ಕ್ಕೆ ಹೊರಟು ಬೆಂಗಳೂರಿಗೆ ರಾತ್ರಿ 11:34ಕ್ಕೆ ತಲುಪಿ, ಹಾಸನಕ್ಕೆ ರಾತ್ರಿ 12:18ಕ್ಕೆ ಮಂಗಳೂರಿಗೆ ಬೆಳಿಗ್ಗೆ 6:19ಕ್ಕೆ ಕಾರವಾರಕ್ಕೆ 11:45ಕ್ಕೆ ತಲುಪಬಹುದಾಗಿದೆ.

ಈ ವೇಳಾಪಟ್ಟಿಯನ್ನು ಈಗಾಗಲೇ ರೈಲ್ವೆ ಬೋರ್ಡಿನ ನ್ಯಾಷನಲ್ ರೈಲ್ವೆ ಯೂಸೆರ್ಸ್ ಕನ್ಸಲ್ಟೇಟಿವ್ ಕೌನ್ಸಿಲ್‌ನ ಸದಸ್ಯರಾಗಿ ನೇಮಕಗೊಂಡ ಬೈಂದೂರಿನ ಕೆ ವೆಂಕಟೇಶ್ ಕಿಣಿ ಅವರಿಗೆ ನೀಡಲಾಗಿದ್ದು, ಅವರ ಮೂಲಕ ಪ್ರಯತ್ನವನ್ನು ನಡೆಸಲಾಗುತ್ತಿದೆ ಎಂದು ಆರ್.ಎಲ್.ಡಯಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News