ಶುಕ್ರವಾರ ಮುಹರ್ರಂ ತಿಂಗಳಾರಂಭ

Update: 2017-09-21 14:53 GMT

ಮಂಗಳೂರು, ಸೆ.21: ಗುರುವಾರ ದುಲ್‌ಹಜ್ ತಿಂಗಳು ಪೂರ್ತಿಗೊಂಡಿರುವುದರಿಂದ ಶುಕ್ರವಾರ (ಸೆ.22) ಮುಹರ್ರಂ 1 ಎಂದು ತೀರ್ಮಾನಿಸಿರುವುದಾಗಿ ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಹಾಗೂ ಉಳ್ಳಾಲ ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸೆ.30 (ಮುಹರ್ರಂ 9) ರಂದು ಮತ್ತು ಅ.1 (ಮುಹರ್ರಂ 10) ರಂದು ಮುಹರ್ರಂ ತಿಂಗಳ ಉಪವಾಸ ಆಚರಣೆ ನಡೆಯಲಿದೆ ಎಂದು ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ತಿಳಿಸಿದ್ದಾರೆ ಎಂದು ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News