ಚೊಕ್ಕಬೆಟ್ಟು: ಸೆ. 24ರಂದು ನೂತನ ‘ಎಚ್.ಕೆ.ಮೆಡಿಕಲ್ ಸೆಂಟರ್’ ಉದ್ಘಾಟನೆ

Update: 2017-09-22 16:57 GMT

ಮಂಗಳೂರು, ಸೆ. 22: ಸುರತ್ಕಲ್ ಸಮೀಪದ ಚೊಕ್ಕಬೆಟ್ಟುವಿನ ಟಮ್ರಾ ರೆಸಿಡೆನ್ಸಿಕಟ್ಟಡದಲ್ಲಿ ನೂತನ ‘ಎಚ್.ಕೆ.ಮೆಡಿಕಲ್ ಸೆಂಟರ್’ ಸೆ. 24ರಂದು ಬೆಳಗ್ಗೆ 9:30ಕ್ಕೆ ಶುಭಾರಂಭಗೊಳ್ಳಲಿದೆ.

ಮಲ್ಜಾಹ್ ದಾವತಿಲ್ ಇಸ್ಲಾಮಿ ಉಜಿರೆ ಇದರ ಅಧ್ಯಕ್ಷ ಅಸ್ಸಯ್ಯದ್ ಜಲಾಲುದ್ದೀನ್ ತಂಙಳ್ ದುವಾ ನೆರವೇರಿಸಲಿದ್ದಾರೆ. ಸಚಿವ ಯು.ಟಿ.ಖಾದರ್ ಅವರು ಕ್ಲಿನಿಕ್‌ನ್ನು ಉದ್ಘಾಟಿಸಲಿದ್ದಾರೆ. ಫಾರ್ಮಸಿಯನ್ನು ಶಸಾಕ ಬಿ.ಎ.ಮೊದಿನ್ ಬಾವ, ಲ್ಯಾಬ್‌ನ್ನು ಕಾಟಿಪಳ್ಳ ಮಿಸ್ಬಾಹ್ ವುಮೆನ್ಸ್ ಕಾಲೇಜಿನ ಅಧ್ಯಕ್ಷ ಬಿ.ಎಂ.ಮುಮ್ತಾಝ್ ಅಲಿ ಉದ್ಘಾಟಿಸಲಿದ್ದಾರೆ.

ಅತಿಥಿಗಳಾಗಿ ಮನಪಾ ಆಯುಕ್ತ ಮುಹಮ್ಮದ್ ನಝೀರ್, ಮುಕ್ಕ ಸೀ ಫುಡ್ ಇಂಡಸ್ಟ್ರೀಸ್‌ನ ಎಂಡಿ ಕೆ.ಮುಹಮ್ಮದ್ ಹಾರಿಸ್, ಕಾರ್ಪೊರೇಟರ್‌ಗಳಾದ ಅಯಾಝ್, ಗುಣಕರ ಶೆಟ್ಟಿ, ಸುರತ್ಕಲ್ ಪಿಸಿಐ ಚೆಲುವರಾಜ್ ಬಿ., ಮುಹಮ್ಮದ್ ಅಝೀಝ್ ಅರೀಕೆರೆ, ಪಿಡಿಯಾಟ್ರಿಶನ್ ಡಾ.ವೌನೇಶ್ ಪಟ್ಟಾರ್, ಡಾ.ಹರೀಶ್ ಶೆಟ್ಟಿ, ಡಾ.ಥೀನ್ ಸಿಂಗ್, ಡಾ.ರಾಘವೇಂದ್ರ ಭಟ್, ಡಾ.ಮುಹಮ್ಮದ್ ಶಮೀಮ್, ಡಾ.ರಾಜೇಶ್ ಆರ್.ವಿ., ಡಾ.ಪ್ರಸಾದ್ ಭಟ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News