ಅಲ್ಝೀಮರ್ ರೋಗಿಗಳಿಗೆ ಸಮಾಧಾನ ನೀಡಿ: ಸಚಿವ ಖಾದರ್

Update: 2017-09-23 11:46 GMT

ಮಂಗಳೂರು ಸೆ.23: ವಯಸ್ಸದಂತೆ ಕಾಡುವ ಅಲ್ಝೆಮರ್ (ಮರೆವು) ಕಾಯಿಲೆಗೆ ಔಷಧಿ ಅಲಭ್ಯವಾಗಿದ್ದರೂ ರೋಗಿಗೆ ಸಮಾಧಾನ ಹೇಳುವ ಮೂಲಕ ಅದನ್ನು ಹತೋಟಿಗೆ ತರಬಹುದು ಎಂದು ಸಚಿವ ಯು.ಟಿ.ಖಾದರ್ ಹೇಳಿದರು.

ನಗರದ ಪುರಭವನದಲ್ಲಿ ಶನಿವಾರ ಆಯೋಜಿಸಲಾದ ವಿಶ್ವ ಅಲ್ಝೆಮರ್ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸಿದರು.
ಅಲ್ಝೆಮರ್ ಕಾಯಿಲೆಯಿಂದ ಬಳಲುವವರಿಗೆ ಪ್ರೀತಿ, ಸ್ನೇಹವನ್ನು ಹೆಚ್ಚು ಹೆಚ್ಚಾಗಿ ಒದಗಿಸಬೇಕು. ಅವರ ಜತೆ ನಾವು ಇದ್ದೇವೆ ಎಂಬ ಧೈರ್ಯವನ್ನು ತುಂಬುವ ಕಾರ್ಯವನ್ನು ಜತೆಗಿರುವವರು ಮಾಡಬೇಕು ಎಂದರು.

ಹಿರಿಯ ವೈದ್ಯರಾದ ಡಾ. ಶಾಂತಾರಾಮ ಶೆಟ್ಟಿ ಮಾತನಾಡಿ, ಹಿರಿಯರು, ಕಿರಿಯರು, ದುರ್ಬಲರು, ಬಲಹೀನರನ್ನು ಯಾವ ರೀತಿ ನೋಡಿಕೊಳ್ಳುತ್ತೇವೆ ಎಂಬುದರಡಿ ನಮ್ಮ ಸಮಾಜ ನೆಲೆಯಾಗಿರುತ್ತದೆ ಎಂದು ವೇಕಾನಂದರು ಹೇಳಿದ್ದಾರೆ. ಹಾಗೆಯೇ ಅಲ್ಝೆಮರ್ ಕಾಯಿಲೆಗೆ ಒಳಗಾದವರನ್ನು ಪ್ರೀತಿ. ವಾತ್ಸಲ್ಯದಿಂದ ನೋಡಿಕೊಳ್ಳಬೇಕು ಎಂದರು.

ಪ್ರಸ್ತುತ ಭಾರತದಲ್ಲಿ 130 ಕೋಟಿ ಜನಸಂಖ್ಯೆ ಇದ್ದು, ಅದರಲ್ಲಿ ಸುಮಾರು 25 ಕೋಟಿಯಷ್ಟು 65 ವರ್ಷ ಮೇಲ್ಪಟ್ಟ ಜನರಿದ್ದಾರೆ. ಅವರಲ್ಲಿ 2 ಮಿಲಿಯನ್ ಜನರು ಅಲ್ಝೆಮರ್ ಕಾಯಿಲೆಗೆ ಒಳಾಗಿದ್ದಾರೆ ಎಂದು ಅವರು ಹೇಳಿದರು.

ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಮಾತನಾಡಿ, ನಮ್ಮ ಜೀವನ ಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಉತ್ತಮ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದರು.

ಮಂಗಳೂರು ಹಿರಿಯ ನಾಗರಿಕರ ಸಂಘದ ಅಧ್ಯಕ್ಷೆ ಡಾ. ಒಲಿಂಡಾ ಪಿರೇರಾ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂ ಕಾಲೇಜಿನ ನಿರ್ದೇಶಕ ಡಾ.ದೇವರಾಜ್, ಯೆನಪೊಯ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಶ್ರೆಕುಮಾರ್ ಮೆನನ್, ಇಂಡಿಯನಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಯೂಸುಫ್ ಕುಂಬ್ಳೆ, ಸ್ಟ್ ನ್ಯೂರೋ ಆಸ್ಪತ್ರೆಯ ಡಾ. ರಾಘವೇಂದ್ರ, ಜೆರಾಲ್ಡಿನ್ ಡಿ ಸೋಜ, ಸಂಘದ ಉಪಾಧ್ಯಕ್ಷೆ ಪ್ರಭಾ ಅಧಿಕಾರಿ ಮೊದಲಾದವರು ಉಪಸ್ಥಿತರಿದ್ದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News