ಮೂಡುಬಿದಿರೆ ರೋಟರಿ ಕ್ಲಬ್‌ನಿಂದ 62ಮಂದಿ "ಪೌರ ಕಾರ್ಮಿಕರಿಗೆ ಸನ್ಮಾನ"

Update: 2017-09-23 14:41 GMT

ಮೂಡುಬಿದಿರೆ, ಸೆ. 23: ಪೌರ ಕಾರ್ಮಿಕ ದಿನಾಚರಣೆಯಂಗವಾಗಿ ಮೂಡುಬಿದಿರೆ ರೋಟರಿ ಕ್ಲಬ್ ವತಿಯಿಂದ ಪುರಸಭೆಯ ಹಿರಿಯ ಪೌರ ಕಾರ್ಮಿಕ ಬೊಗ್ಗು ಸಹಿತ 62 ಜನ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವು ಸಮಾಜ ಮಂದಿರ ಸಭಾದ ಸ್ವರ್ಣಮಂದಿರದಲ್ಲಿ ಶನಿವಾರ ನಡೆಯಿತು.

ಶಾಸಕ ಕೆ. ಅಭಯಚಂದ್ರ ಜೈನ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿ ಸ್ವಚ್ಛತೆಗೆ ಆದ್ಯತೆ ನೀಡಿ ಸ್ವಚ್ಛ ಮೂಡುಬಿದಿರೆ ಹಾಗೂ ಸ್ವಚ್ಛ ಆಸ್ಪತ್ರೆ ಎಂದು ರಾಜ್ಯದಲ್ಲಿ ಪ್ರಥಮವಾಗಿ ಗುರುತಿಸಿಕೊಳ್ಳುವಲ್ಲಿ ಮೂಡುಬಿದಿರೆ ಪುರಸಭೆಯ ಪೌರ ಕಾರ್ಮಿಕರ ಪಾತ್ರ ಮತ್ತು ಅಧಿಕಾರಿಗಳ ಪರಿಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಉಪಾಧ್ಯಕ್ಷ ವಿನೋದ್ ಸೆರಾವೋ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ,ಕೆಪಿಸಿಸಿ ವೀಕ್ಷಕ ಐವನ್ ನೀಗ್ಲಿ, ಝೋನ್ 4ರ ಅಸಿಸ್ಟೆಂಟ್ ಗವರ್ನರ್ ರೋ. ಎ.ಎಂ ಕುಮಾರ್, ಪುರಸಭೆ ಪರಿಸರ ಅಭಿಯಂತರೆ ಶಿಲ್ಪಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರೋಟರಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ ಮುರಳೀಕೃಷ್ಣ, ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷ ಪಿ.ಕೆ.ತೋಮಸ್, ಪುರಸಭಾ ಕಂದಾಯ ಅಧಿಕಾರಿ ಧನಂಜಯ ಈ ಸಂದರ್ಭದಲ್ಲಿ ಉಪಸ್ಥಿತರಿದರು.

  ಶಾಲು, ಊಟದ ತಟ್ಟೆಯಲ್ಲಿ ಫಲಪುಪ್ಪ,ಮಹಿಳೆಯರಿಗೆ ಸೀರೆ, ಪುರುಷರಿಗೆ ಪ್ಯಾಂಟ್ ಶರ್ಟು, ಸ್ಮರಣಿಕೆ ಹಾಗೂ 10 ಕೆ.ಜಿ ಅಕ್ಕಿ ಪೌರ ಕಾರ್ಮಿಕರಿಗೆ ನೀಡಿದ ಸನ್ಮಾನದಲ್ಲಿ ಒಳಗೊಂಡಿತ್ತು.

 ರೋಟರಿ ಅಧ್ಯಕ್ಷ ಶ್ರೀಕಾಂತ್ ಕಾಮತ್ ಸ್ವಾಗತಿಸಿದರು. ಅವಿಲ್ ಡಿ"ಸೋಜಾ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ಮಹಮ್ಮದ್ ಆರಿಫ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News