ಪೊಲೀಸ್ ಕಿರುಕುಳ ಆರೋಪಿಸಿ ಶಾಸಕರ ನೇತೃತ್ವದಲ್ಲಿ ಧರಣಿ

Update: 2017-09-23 14:53 GMT

ಮಂಜೇಶ್ವರ, ಸೆ. 23: ಅಮಾಯಕರಿಗೆ ಕುಂಬಳೆ ಪೊಲೀಸ್ ಕಿರುಕುಳ ನೀಡುತ್ತಿದೆಯೆಂದು ಆರೋಪಿಸಿ ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಝಾಕ್ ನೇತೃತ್ವದ ಮುಸ್ಲಿಂ ಲೀಗ್ ನಾಯಕರು ಕುಂಬಳೆ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದ ಘಟನೆ ಶನಿವಾರ ನಡೆದಿದೆ.

2 ದಿನಗಳ ಹಿಂದೆ ಬಂದ್ಯೋಡು ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ತಡೆದು ಗಾಜು ಪುಡಿಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿ ಎಫ್.ಐ.ಆರ್ ದಾಖಲಿಸಿದ್ದರು. ಇದರ ಬಳಿಕ ಕಳೆದ ರಾತ್ರಿ ಇಚ್ಚಿಲಂಗೋಡಿನ ಸಿರಾಜ್ ಎಂಬಾತನನ್ನು ಕುಂಬಳೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಪೊಲೀಸ್ ವಶಕ್ಕೆ ತೆಗೆದುಕೊಂಡ ಸಿರಾಜ್ ಅಮಾಯಕನೆಂದು ಈತನನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಪೊಲೀಸರು ಅಮಾಯಕರಿಗೆ ಕಿರುಕುಳ ನೀಡುತ್ತಿದೆಯೆಂದು ಆರೋಪಿಸಿ ಶಾಸಕರ ನೇತೃತ್ವದಲ್ಲಿ ಪೊಲೀಸ್ ಠಾಣೆ ಮುಂಭಾಗದಲ್ಲಿ ಧರಣಿ ನಡೆಸಲಾಗಿದೆ.

ಧರಣಿಯಲ್ಲಿ ಮುಖಂಡರುಗಳಾದ ಎ.ಕೆ.ಎಂ ಅಶ್ರಫ್ , ಎಂ.ಅಬ್ಬಾಸ್, ಶಾಹುಲ್ ಹಮೀದ್ , ಎ.ಕೆ ಆರಿಫ್ , ಅಶ್ರಫ್ ಕಾರ್ಳ ಮೊದಲಾದವರು ಉಪಸ್ತಿತರಿದ್ದರು.

ವಶಕ್ಕೆ ತೆಗೆದುಕೊಂಡ ಸಿರಾಜ್ ನ ಬಿಡುಗಡೆ

ಬಂದ್ಯೋಡು ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ನ ಗಾಜು ಪುಡಿಗೈದ ಪ್ರಕರಣದ ಆರೋಪಿಯನ್ನಾಗಿಸಲು ಪೊಲೀಸರು ವಶಕ್ಕೆ ತೆಗೆದುಕೊಂಡ ಇಚ್ಚಿಲಂಗೋಡಿನ ಸಿರಾಜ್ ಎಂಬಾತನನ್ನು ಪೊಲೀಸರು ಶಾಸಕರ ನೇತೃತ್ವದ ಪ್ರತಿಭಟನೆ ಮೇರೆಗೆ ಮಧ್ಯಾಹ್ನ ಬಿಡುಗಡೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News