ಮಹಿಳೆ ನಾಪತ್ತೆ: ದೂರು ದಾಖಲು

Update: 2017-09-24 15:21 GMT

ಕೊಣಾಜೆ, ಸೆ. 24: ಮುಡಿಪು ಸಮೀಪದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಡಿಪು ನಿವಾಸಿ ಝುಬೈದಾ (25)  ನಾಪತ್ತೆಯಾದ ಮಹಿಳೆ ಎಂದು ಗುರುತಿಸಲಾಗಿದೆ.

ಶನಿವಾರ ಬಿ.ಸಿರೋಡ್‌ಗೆ ಹೋಗುತ್ತೇನೆ ಎಂದು ಹೋದವರು ಮತ್ತೆ ಹಿಂತಿರುಗಿ ಬಾರದೇ ನಾಪತ್ತೆಯಾಗಿದ್ದಾರೆ ಎಂದು ಕೊಣಾಣೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಝುಬೈದಾ ಮತ್ತು ಪತಿ ಅಶ್ರಫ್ ಎಂಬವರ ಮಧ್ಯೆ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿ ಮಾತು ನಡೆದಿತ್ತು ಎನ್ನಲಾಗಿದೆ. ಝುಬೈದಾ ಅವರ ತವರು ಮನೆ ಸಜಿಪದಲ್ಲಿ ಇರುವುದರಿಂದ ಕೌಟುಂಬಕ ಸಮಸ್ಯೆಯಿಂದ ಬೇಸತ್ತು ಹೋಗಿರಬೇಕೆಂದು ಶಂಕಿಸಲಾಗಿದೆ. ಈ ಬಗ್ಗೆ ಅಶ್ರಫ್ ಅವರು ನೀಡಿರುವ ದೂರಿನ ಮೇರೆಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News