ಯುವಕರಲ್ಲಿ ಸಾಹಿತ್ಯ ಆಸಕ್ತಿ ಕುಂಠಿತ: ಪ್ರೊ.ಪ್ರಸನ್ನ

Update: 2017-09-24 15:40 GMT

ಉಡುಪಿ, ಸೆ.24: ಯುವಕರಲ್ಲಿ ಸಾಹಿತ್ಯ ಆಸಕ್ತಿ ಇಂದು ತೀರಾ ಕಡಿಮೆ ಆಗುತ್ತಿದೆ. ಕಾಲೇಜುಗಳಲ್ಲಿ ಕಲಾ ವಿಭಾಗದ ಮಕ್ಕಳಿಗಿಂತ ಬಿಎಸ್ಸಿ, ಬಿಕಾಂ ವಿದ್ಯಾರ್ಥಿಗಳಲ್ಲೇ ಸಾಹಿತ್ಯ ಕುರಿತ ಆಸಕ್ತಿ ಹೆಚ್ಚು ಎಂದು ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ.ಪಿ.ಬಿ.ಪ್ರಸನ್ನ ಹೇಳಿದ್ದಾರೆ.

ಉಡುಪಿ ರಥಬೀದಿ ಗೆಳೆಯರು ವತಿಯಿಂದ ವಿಕಾಸ್ ವಿಷ್ಣು ಅಲೆವೂರು ಅವರ ‘ಚಪ್ಪಲಿ ಚಿತ್ತ’ ಕೃತಿಯನ್ನು ರವಿವಾರ ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದ ಧ್ವನ್ಯಾಲೋಕದಲ್ಲಿ ಬಿಡುಗಡೆಗೊಳಿಸಿ ಅವರು ಮಾತ ನಾಡುತಿದ್ದರು.

ರಥಬೀದಿ ಗೆಳೆಯರು ಸಂಘಟನೆಯ ಅಧ್ಯಕ್ಷ ಪ್ರೊ.ಮುರಳೀಧರ ಉಪಾ ಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ, ಉಡುಪಿ ಜಿಲ್ಲಾ ಕೇಂದ್ರದಲ್ಲಿ ಒಂದು ಸುಸಜ್ಜಿತ ರಂಗ ಮಂದಿರ ನಿರ್ಮಿಸಲು ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಈವರೆಗೆ ಸಾಧ್ಯವಾಗಿಲ್ಲ. ಈ ಸಂಬಂಧ ನಗರಸಭೆಗೆ ಪತ್ರ ಬರೆದರೂ ಉತ್ತರ ಬಂದಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಂಗ ಮಂದಿರ ನಿರ್ಮಾಣಕ್ಕೆ 2 ಕೋಟಿ ರೂ. ಮೀಸಲಿಟ್ಟಿದ್ದರೂ ನಗರಸಭೆ ಇನ್ನು ಕೂಡ ಜಾಗ ಗುರುತಿಸಿಲ್ಲ ಎಂದು ಆರೋಪಿಸಿದರು.

ಅಧ್ಯಕ್ಷತೆಯನ್ನು ಉಡುಪಿ ಸುಹಾಸಂ ಕಾರ್ಯದರ್ಶಿ ಕು.ಗೋಪಾಲ ಭಟ್ ವಹಿಸಿದ್ದರು. ಲೇಖಕ ವಿಕಾಸ್ ವಿಷ್ಣು ಅಲೆವೂರು ಉಪಸ್ಥಿತರಿದ್ದರು. ರಥಬೀದಿ ಗೆಳೆಯರು ಸಂಘಟನೆಯ ಕಾರ್ಯದಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News