ಜಲೀಲ್ ಕರೋಪಾಡಿ ಕುಟುಂಬಕ್ಕೆ 75ಲಕ್ಷ ರೂ. ಪರಿಹಾರ ನೀಡುವಂತೆ ಪಿಎಫ್‍ಐ ಒತ್ತಾಯ

Update: 2017-09-25 14:29 GMT

ಬಂಟ್ವಾಳ, ಸೆ. 25: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಕರೋಪಾಡಿಯವರ ಹತ್ಯೆ ಪ್ರಕರಣವನ್ನು ರಾಜ್ಯ ಸರಕಾರವು ಸಿಐಡಿ ತನಿಖೆಗೆ ಹಸ್ತಾಂತರಿಸಿದನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ಸ್ವಾಗತಿಸಿದೆ.

 ಘಟನೆ ನಡೆದ ಆರಂಭದಲ್ಲಿ ನೈಜ ಆರೋಪಿಗಳನ್ನು ಬಂಧಿಸದೆ ಬೇರೆ 11 ಆರೋಪಿಗಳನ್ನು ಬಂಧಿಸಿದ್ದು  ಈ ಪ್ರಕರಣದಲ್ಲಿ ಪೋಲಿಸ್ ಇಲಾಖೆ ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಜಲೀಲ್ ಕರೋಪಾಡಿಯವರ ತಂದೆ ಉಸ್ಮಾನ್ ಕರೋಪಾಡಿಯವರು ಆರೋಪಿಸಿದ್ದರು. ಇದೀಗ ಈ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿ ತನಿಖೆಗೆ ಹಸ್ತಾಂತರಿಸಿದೆ.

 ಈ ಕೊಲೆ ಪ್ರಕರಣವನ್ನು ಸಿಐಡಿಯು ಪಕ್ಷಾತೀತವಾಗಿ ತನಿಖೆ ನಡೆಸಿ ತಪ್ಪತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅದೇ ರೀತಿ ಅಬ್ದುಲ್ ಜಲೀಲ್ ಕರೋಪಾಡಿಯವರ ಕುಟುಂಬಕ್ಕೆ ರಾಜ್ಯ ಸರಕಾರದ ವತಿಯಿಂದ 75ಲಕ್ಷ ರೂ. ಪರಿಹಾರವನ್ನು ನೀಡಬೇಕು.

ಮೃತ ಅಬ್ದುಲ್ ಜಲೀಲ್ ಕರೋಪಾಡಿಯವರ ತಂದೆ ಉಸ್ಮಾನ್ ಕರೋಪಾಡಿಯವರಿಗೆ ಭೂಗತಲೋಕದ ಬೆದರಿಕೆ ಇರುವುದರಿಂದ ಅವರಿಗೆ ಸೂಕ್ತ ಭದ್ರತೆಯನ್ನು ರಾಜ್ಯ ಸರಕಾರ ನೀಡಬೆಕೆಂದು ಪಾಪ್ಯುಲರ್ ಫ್ರಂಟ್ ಬಂಟ್ವಾಳ ತಾಲೂಕು ಸಮಿತಿ ಆಗ್ರಹಿಸುತ್ತಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News