ಡಿಸಿ ಮನ್ನಾ ಜಮೀನು ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಧರಣಿ

Update: 2017-09-25 14:32 GMT

ಬಂಟ್ವಾಳ, ಸೆ. 25: ಕಡೇಶ್ವಾಲ್ಯ ಗ್ರಾಮ ಡಿಸಿ ಮನ್ನಾ ಜಮೀನಿನ ಹಕ್ಕುಪತ್ರ ಹೋರಾಟ ಸಮಿತಿ ವತಿಯಿಂದ ಸೋಮವಾರ ಕಡೇಶ್ವಾಲ್ಯ ಗ್ರಾಮದ ಜನರಿಗೆ ಡಿಸಿ ಮನ್ನಾ ಜಮೀನು ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಧರಣಿ ನಡೆಯಿತು.

ಕಡೇಶ್ವಾಲ್ಯ ಗ್ರಾಮದ ಸ.ನಂ. 216/3ರ 2. 69 ಎಕರೆ  ಜಮೀನಿನಲ್ಲಿ ಹೊರ ಗ್ರಾಮದವರು ದರ್ಖಾಸ್ತು ಮಂಜೂರಿಗೆ ಕೇಳಿರುವ ಅರ್ಜಿಯನ್ನು ತಿರಸ್ಕರಿಸಬೇಕು. ಈ ಸ್ಥಳದಲ್ಲಿ ನಿರ್ಮಾಣಮಾಡಿರುವ ಮನೆಗಳನ್ನು ತೆರವು ಮಾಡದೇ, ಹಕ್ಕು ಪತ್ರ ನೀಡಬೇಕು. ಡಿಸಿ ಮನ್ನಾ ಜಮೀನನ್ನು ಹೊರ ಗ್ರಾಮದ ನಿವಾಸಿಗಳಿಗೆ ಮಂಜೂರು ಮಾಡಬಾರದು ಎಂದು ಧರಣಿ ನಿರತರು ಒತ್ತಾಯಿಸಿದರು.

ಪ.ಜಾತಿ ಪಂಗಡ ಕಾಂಗ್ರೆಸ್ ಮೋರ್ಚಾ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಜನಾರ್ದನ ಚಂಡ್ತಿಮಾರು ಮಾತನಾಡಿ, ನಮ್ಮ ಬೇಡಿಕೆಗಳ ಈಡೇರಿಕೆಗೆ ಯಾವುದೇ ಬೆಲೆ ತೆತ್ತಾದರೂ ಹೋರಾಟ ಮಾಡಲಾಗುವುದು ಎಂದರು.

 ಧರಣಿಯಲ್ಲಿ ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ,  ಉಪಾಧ್ಯಕ್ಷ ಬಾಲಚಂದ್ರ ಸೊರಕೆ,  ರಾಜ್ಯ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಖಾದರ್, ಸಿಐಟಿಯು ಮುಖಂಡ ರಾಮಣ್ಣ, ದಲಿತ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಭಾನುಚಂದ್ರ ಕೃಷ್ಣಾಪುರ,  ಹೋರಾಟ ಸಮಿತಿ ಗೌರವ ಅಧ್ಯಕ್ಷ ಹೊನ್ನಪ್ಪ ನಾಯ್ಕ ಓಣಿಬಾಗಿಲು,  ಅಧ್ಯಕ್ಷ ಜಯ. ವಿ.,  ನಲಿಕೆ ಸೇವಾ ಸಮಿತಿ ಅಧ್ಯಕ್ಷ ರಾಘವೇಂದ್ರ ಸುರುಳಿಮೂಲೆ, ಮರಾಠಿ ಸಮಾಜ ಸೇವಾ ಸಂಘ ಅಧ್ಯಕ್ಷ ಜಯರಾಮ ನಾಯ್ಕ ಸೂರಂಗೋಲು, ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಚಂದ್ರ ಇಜಿಪ್ಪಾಡಿ, ಸಾಮಾಜಿಕ ಹೋರಾಟಗಾರ ಜಿನ್ನಪ್ಪ ಬಂಗೇರ, ಎಸ್.ಪಿ. ಆನಂದ ಮತ್ತಿತರರು ಇದ್ದರು. ಧರಣಿ ನಂತರ ಮನವಿಯನ್ನು ಸ್ಥಳೀಯ ಪಂಚಾಯತ್‍ಗೆ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News