ಸೂರಿಂಜೆ ಜುಮಾ ಮಸೀದಿಗೆ ಚುನಾವಣೆ ಘೋಷಣೆ

Update: 2017-09-25 16:49 GMT

ಮಂಗಳೂರು, ಸೆ. 25: ಕರ್ನಾಟಕ ರಾಜ್ಯ ವಕ್ಫ್ ಸಂಸ್ಥೆಯ ಅಧಿಸೂಚನೆಯಂತೆ ಸೂರಿಂಜೆ ಮುಹಿಯುದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿಗೆ ಚುನಾವಣೆ ಘೋಷಣೆಯಾಗಿದೆ.

ಮುಹಿಯುದ್ದೀನ್ ಜುಮಾ ಮಸೀದಿಯ ಆಡಳಿತ ಸಮಿತಿಯ ವಿಚಾರದಲ್ಲಿ ಉಂಟಾಗಿರುವ ಆಂತರಿಕ ಬಿಕ್ಕಟ್ಟನ್ನು ನಿವಾರಿಸುವ ಉದ್ದೇಶದಿಂದ 2015ರ ಆಗಸ್ಟ್ 12ರಂದು ಹಾಜಿ ಅಬ್ದುಲ್ ಹಮೀದ್ ಅವರನ್ನು ಅಲ್ಲಿನ ಆಡಳಿತಾಧಿಕಾರಿ ವಕ್ಫ್ ಸಂಸ್ಥೆಯು ನೇಮಕ ಮಾಡಿತ್ತು.

ಇದೀಗ ಸಮಿತಿಗೆ ಚುನಾವಣೆ ಘೋಷಣೆಯಾಗಿದ್ದರಿಂದ ಸೆ. 25ರಿಂದ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಸೆ.28ರಿಂದ ಅ.6ರವರೆಗೆ ಉಮೇದುವಾರಿಕೆ ಅರ್ಜಿ ಸ್ವೀಕರಿಸುವ ದಿನಾಂಕವಾಗಿದ್ದು, ಅ.8ರಂದು ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ. ಅಗತ್ಯವಿದ್ದಲ್ಲಿ ಅ.15ರಂದು ಸೂರಿಂಜೆ ಹಿದಾಯತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚುನಾವಣೆ ನಡೆದು ಅದೇ ದಿನ ಫಲಿತಾಂಶ ಪ್ರಕಟಿಸಲಾಗುವುದು ಎಂದು ಉಪಚುನಾವಣಾಧಿಕಾರಿ ಮತ್ತು ನಿವೃತ್ತ ಪಿಎಸ್‌ಐ ವಿ.ಮುಹಮ್ಮದ್ ಮತ್ತು ಮಸೀದಿಯ ಆಡಳಿತಾಧಿಕಾರಿ ಅಬ್ದುಲ್ ಹಮೀದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News