ಬೂತ್‍ನಲ್ಲಿ ಮುನ್ನಡೆಯಾದರೆ ಕ್ಷೇತ್ರದಲ್ಲಿ ಗೆಲುವು ಸಾಧ್ಯ : ಕೃಷ್ಣಶೆಟ್ಟಿ

Update: 2017-09-26 13:36 GMT

ಪುತ್ತೂರು,ಸೆ.26: ಪ್ರತಿಯೊಂದು ಬೂತುಗಳಲ್ಲಿ ಪಕ್ಷಕ್ಕೆ ಮುನ್ನಡೆಯಾದಲ್ಲಿ ಮಾತ್ರ ಕ್ಷೇತ್ರದಲ್ಲಿ ಗೆಲುವು ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರ ಪ್ರಯತ್ನಗಳು ನಡೆಯಬೇಕು ಎಂದು ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷರಾದ ಪುತ್ತೂರು ಬಿಜೆಪಿ ಮಂಡಲದ ಉಸ್ತುವಾರಿ ಕಡಬ ಕೃಷ್ಣ ಶೆಟ್ಟಿ ಹೇಳಿದರು.

ಅವರು ಮಂಗಳವಾರ ಪುತ್ತೂರು ಟೌನ್ ಕೋ ಆಪರೇಟಿವ್ ಸಭಾಭವನದಲ್ಲಿ ನಡೆದ ಪುತ್ತೂರು ಗ್ರಾಮಾಂತರ ಮಂಡಲ ಮತ್ತು ನಗರ ಮಂಡಲಗಳ ಜಂಟಿ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ ಬಾರಿಯ ಚುನಾವಣೆಯಲ್ಲಿ ಕೆಲವೊಂದು ಪ್ರಮಾದಗಳಿಂದಾಗಿ ನಾವು ರಾಜ್ಯದಲ್ಲಿ ಅಧಿಕಾರ ಪಡೆಯಲು ತೊಡಕಾಯಿತು. ಅಲ್ಲದೆ ಪುತ್ತೂರು ಕ್ಷೇತ್ರವನ್ನೂ ಕಳೆದುಕೊಳ್ಳಬೇಕಾಯಿತು. ಈ ಬಾರಿ ಅಧಿಕಾರವನ್ನು ಮರಳಿ ಪಡೆಯಬೇಕಾಗಿದೆ. ಇದಕ್ಕಾಗಿ ಬೂತು ಮಟ್ಟದಲ್ಲಿ ಪಕ್ಷದ ಮತವನ್ನು ಹೆಚ್ಚಿಸುವ ಕಾರ್ಯವನ್ನು ಬೂತ್ ಉಸ್ತುವಾರಿಗಳು ಮಾಡಬೇಕಾಗಿದೆ ಎಂದರು. 

ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬಂದ ಸಂದರ್ಭದಲ್ಲಿ ರಾಜ್ಯದಲ್ಲಿ 150+ ಸ್ಥಾನ ಗೆಲ್ಲುವ ಗುರಿ ನಿಗದಿಪಡಿಸಿ ಹೋಗಿದ್ದು, ನಮ್ಮೆಲ್ಲರಿಗೆ ಈ ಕೆಲಸದ ಜವಾಬ್ದಾರಿಯನ್ನು ನೀಡಿದ್ದಾರೆ. ಇದನ್ನು ಸಾಧಿಸಲು ಪ್ರತಿಯೊಬ್ಬ ಕಾರ್ಯಕರ್ತರ ಸಹಕಾರ ಅಗತ್ಯ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದರು. 

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪಕ್ಷದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಯತೀಶ್ ಆರ್ವಾರ್, ಪಕ್ಷದ ಪ್ರಮುಖರಾದ ಬಂಗಾರಡ್ಕ ವಿಶ್ವೇಶ್ವರ ಭಟ್, ಅಪ್ಪಯ್ಯ ಮಣಿಯಾಣಿ, ಗೋಪಾಲಕೃಷ್ಣ ಹೇರಳೆ, ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ್, ಜಿಪಂ ಸದಸ್ಯೆ ಶಯನಾ ಜಯಾನಂದ್, ತಾಪಂ ಸದಸ್ಯರಾದ ಹರೀಶ್ ಬಿಜತ್ರೆ, ಎಪಿಎಂಸಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಆರ್.ಸಿ. ನಾರಾಯಣ್ ರೆಂಜ, ಪ್ರಮುಖರಾದ ಕೇಶವ ಗೌಡ ಬಜತ್ತೂರು, ಕರುಣಾಕರ ಗೌಡ ಎಲಿಯ  ಉಪಸ್ಥಿತರಿದ್ದರು.

ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅವರು ಶಕ್ತಿಕೇಂದ್ರಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಹೆಸರನ್ನು ಘೋಷಿಸಿದರು. ನಗರ ಮಂಡಲ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್‍ದಾಸ್ ಹಾರಾಡಿ ಕಾರ್ಯಕಾರಣಿ ವರದಿ ಮಂಡಿಸಿದರು. ಗ್ರಾಮಾಂತರ ಮಂಡಲ ಕಾರ್ಯದರ್ಶಿ ಶಂಭು ಭಟ್ ಬೂತ್ ಜವಾಬ್ದಾರಿಗಳನ್ನು ಘೋಷಿಸಿದರು. ನಗರ ಮಂಡಲ ಅಧ್ಯಕ್ಷ ಜೀವಂಧರ ಜೈನ್ ಸ್ವಾಗತಿಸಿದರು. ತಿಲಕ್ ರೈ ಕುತ್ಯಾಡಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News