ಉಡುಪಿ : ಕೈತೊಳೆಯುವಿಕೆ ಮಹತ್ವದ ಬಗ್ಗೆ ಜಾಗೃತಿ ಅಭಿಮಾನ

Update: 2017-09-26 14:14 GMT

ಉಡುಪಿ, ಸೆ.26: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ‘ಸ್ವಚ್ಛತಾ ಹಿ ಸೇವಾ’ ಸರಣಿಯ ಅಂಗವಾಗಿ ಕೈತೊಳೆಯುವಿಕೆಯ ಮಹತ್ವದ ಕುರಿತು ಜಾಗೃತಿ ಹಾಗೂ ಪ್ರಾತ್ಯಕ್ಷಿಕೆಯ ಅಭಿಯಾನವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಎನ್ನೆಸ್ಸೆಸ್ ಶಿಬಿರಾರ್ಥಿಗಳು ಕೈಗಳ ಶುಚಿತ್ವದ ಕುರಿತು ಎಸ್‌ಡಿಎಂ ಆಯು ರ್ವೇದ ಆಸ್ಪತ್ರೆಯ ಒಳರೋಗಿಗಳು ಹಾಗೂ ಅವರ ಸಹಾಯಕರುಗಳಿಗೆ ಜಾಗೃತಿ ಕಾರ್ಯಕ್ರಮವನ್ನು ನಡೆಸಿದರು. ಕೈತೊಳೆಯುವ ಸರಿಯಾದ ಕ್ರಮದ ಕುರಿತು ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡಿದರು. ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರಕಟಣಾ ಪತ್ರ ಸ್ಪರ್ಧೆಯೂ ಸಹ ಈ ಸಂದರ್ಭದಲ್ಲಿ ಜರಗಿತು.

ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಡಾ.ವಿದ್ಯಾ ಲಕ್ಷ್ಮಿ ಕೆ., ಸಹಯೋಜನಾಧಿಕಾರಿಗಳಾದ ಡಾ.ಮೊಹಮ್ಮದ್ ಫೈಸಲ್, ಡಾ. ಅನಿರುದ್ಧ, ಡಾ.ಶ್ರೀನಿಧಿ ಧನ್ಯ, ಡಾ.ಹರ್ಷಿತ ಎಂ.ಎಸ್. ಕಾರ್ಯಕ್ರಮವನ್ನು ಆಯೋಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News