ಹಿರಿಯಡ್ಕ: ನ್ಯಾಕ್ ಸಮಿತಿ ಮೌಲ್ಯಮಾಪನ

Update: 2017-09-26 15:09 GMT

ಉಡುಪಿ, ಸೆ.26: ಹಿರಿಯಡಕದ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಸುತ್ತಿನ ನ್ಯಾಕ್ ಸಮಿತಿಯ ಮೌಲ್ಯಮಾಪನದಂತೆ ಸಿಜಿಪಿಎ 2.04, ‘ಬಿ’ ಶ್ರೇಣಿ ಮಾನ್ಯತೆಯನ್ನು ಪಡೆದಿದ್ದು, ಸೆ.12ರಿಂದ 5ವರ್ಷಗಳ ಕಾಲಾವಧಿಗೆ ಈ ಮಾನ್ಯತೆಯನ್ನು ಕಾಯ್ದಿರಿಸಲಾಗಿದೆ.

ಕಳೆದ ತಿಂಗಳು ನ್ಯಾಕ್ ತಂಡದಿಂದ ಕಾಲೇಜಿನ ವೌಲ್ಯಮಾಪನ ಕಾರ್ಯ ನಡೆದಿತ್ತು. ಲಕ್ನೋದ ಬಾಬು ಬನಾರಸಿದಾಸ ವಿವಿಯ ಕುಲಪತಿ ಪ್ರೊ.ಎ.ಕೆ. ಮಿತ್ತಲ್ ಅಧ್ಯಕ್ಷತೆ ನ್ಯಾಕ್ ನಿಯೋಗದಲ್ಲಿ ಸಂಯೋಜಕರಾಗಿ ಹರಿಯಾಣದ ಕುರುಕ್ಷೇತ್ರ ವಿವಿಯ ಪ್ರಾಧ್ಯಾಪಕ ಪ್ರೊ. ನರೇಶ್ ಕುಮಾರ್, ಪುಣೆಯ ವಿದ್ಯಾ ಪ್ರತಿಷ್ಠಾನ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪ್ರಾಂಶುಪಾಲ ಡಾ. ಅರುಣ್ ಅಡೂ್ಸಲ್ ಸದಸ್ಯರಾಗಿ ಭಾಗವಹಿಸಿದ್ದರು.

ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಸಂಸ್ಥೆಗೆ ಶುಭ ಹಾರೈಸಿದ್ದಾರೆ. ಕಾಲೇಜಿನ ಮೂಲಭೂತ ಸೌಕರ್ಯಗಳು, ಅಭಿವೃದ್ಧಿ ಸಮಿತಿ ಶಿಕ್ಷಕ-ರಕ್ಷಕ, ಹಳೆ ವಿದ್ಯಾರ್ಥಿ ಸಮಿತಿ, ಬೋಧಕರ ಶೈಕ್ಷಣಿಕ ಶಾಧನೆ, ವಿದ್ಯಾರ್ಥಿಗಳ ಕಲಿಕೆ ಹಾಗೂ ಪಠ್ಯೇತರ ಚಟುವಟಿಕೆಗಳ ಬಗ್ಗೆಯೂ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಿ.ಆರ್. ರಾಯ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News