ಅಂಜುಮನ್ ಪಿ.ಯು.ಕಾಲೇಜ್ ಪ್ರಾಂಶುಪಾಲರಾಗಿ ಯೂಸೂಫ್ ಕೋಲಾ

Update: 2017-09-26 18:10 GMT

ಭಟ್ಕಳ,ಸೆ.26: ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಪದವಿಪೂರ್ವ ಕಾಲೇಜ್ ನೂತನ ಪ್ರಾಂಶುಪಾಲರಾಗಿ ಮುಹಮ್ಮದ್ ಯೂಸೂಫ್ ಕೋಲಾ ನೇಮಕಗೊಂಡಿದ್ದಾರೆಂದು ಸಂಸ್ಥೆಯ ಕಾರ್ಯದರ್ಶಿ ಜಾವೀದ್ ಅರ್ಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಉಪಪ್ರಾಂಶುಪಾಲರಾಗಿ ಆಂಗ್ಲ ಭಾಷಾ ಉಪನ್ಯಾಸಕ ಅಬ್ದುಲ್ ರಹೀಂ ಖಾನ್ ನೇಮಕಗೊಂಡಿದ್ದಾರೆ.

ಅಂಜುಮನ್ ಶಿಕ್ಷಣ ಸಂಸ್ಥೆಯಲ್ಲೆ ವಿದ್ಯಾಭ್ಯಾಸ ಪೂರ್ಣಗೊಳಿಸಿ ಈಗ ಅದೇ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ನೇಮಕಗೊಂಡಿದ್ದಕ್ಕೆ ಯೂಸೂಫ್ ಕೋಲಾ ಹರ್ಷವನ್ನು ವ್ಯಕ್ತಪಡಿಸಿದ್ದು ಸಂಸ್ಥೆಯನ್ನು ಬೆಳೆಸುವಲ್ಲಿ ಅವಿರತ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.

ನವಾಯತ್ ಸಮುದಾಯದ ಮೊದಲ ಪ್ರಾಂಶುಪಾಲರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಯೂಸೂಫ್ ಸಮುದಾಯವನ್ನು ಹಾಗೂ ಸಂಸ್ಥೆಯನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಥದತ್ತ ಮುನ್ನೆಡೆಸುವಂತಾಗಲಿ ಎಂದು ವಿವಿದ ಸಂಘಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಶುಭವನ್ನು ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News