ರಾಮಚಂದ್ರ ನಾಯ್ಕ ಮನೆಗೆ ಭೇಟಿ ನೀಡಿದ ತಂಝೀಮ್ ನಿಯೋಗ

Update: 2017-09-27 13:55 GMT

ಭಟ್ಕಳ, ಸೆ. 27: ಪುರಸಭೆಯ ಅಂಗಡಿ ಕಳೆದುಕೊಳ್ಳುವ ಭೀತಿಯಲ್ಲಿ ಪುರಸಭೆ ಕಟ್ಟಡದಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೈದ ವರ್ತಕ ರಾಮಚಂದ್ರ ನಾಯ್ಕ ರ ಮನೆಗೆ ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ನಿಯೋಗದ ಸದಸ್ಯರು ಬುಧವಾರ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಈ ಸಂದರ್ಭದಲ್ಲಿ ತಂಝೀಮ್ ಅಧ್ಯಕ್ಷ ಕರ್ನಾಟಕ ಸಾಂಬರು ಮಂಡಳಿ ಮಾಜಿ ಅಧ್ಯಕ್ಷ ಮುಝಮ್ಮಿಲ್ ಕಾಝಿಯಾ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ, ತಂಝೀಮ್ ಸಂಸ್ಥೆಯು ಬಡ ಅಂಗಡಿಕಾರರ ಪರವಾಗಿದೆ. ಕಾನೂನಿನ ತೊಡಕುಗಳನ್ನು ನಿವಾರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದ ಅವರು ನಾವು ಬಹಳ ಹಿಂದೆಯೇ ಪುರಸಭೆಯ ಅಂಗಡಿಗಳನ್ನು ಹರಾಜು ಮಾಡಬಾರಬಾರದು ಎಂಬ ನಿಲುವು ಹೊಂದಿದ್ದು ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳನ್ನು ಹರಾಜು ಮಾಡಲಾಗಿದೆ. ಇದರಿಂದಾಗಿ ಬಡ ಅಂಗಡಿಕಾರರಿಗೆ ತೊಂದರೆಯಾಗಿದೆ ಎಂದು ತಿಳಿಸಿದರು. ತಂಝೀಮ್ ಸಂಸ್ಥೆಯಿಂದ ಮೃತರ ಕುಟುಂಬಕ್ಕೆ 25,000 ರೂ. ಸಹಾಯ ಧನ ನೀಡಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ಅಲ್ತಾಫ್ ಖರೂರಿ, ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಡಿ.ಎಫ್.ಸಿದ್ದೀಕ್, ಸಿದ್ದೀಖ್ ಮೀರಾ, ಅಬುಲ್ ಕಾಸಿಂ ಎಸ್.ಎಂ. ಪುರಸಭೆ ಸದಸ್ಯ ವೆಂಕಟೇಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News