ಮಂಜೇಶ್ವರ: ಪಾನ್ ಮಸಾಲ ಸಹಿತ ಇಬ್ಬರ ಬಂಧನ

Update: 2017-09-27 15:01 GMT

ಮಂಜೇಶ್ವರ, ಸೆ. 27: ಪಾನ್ ಮಸಾಲ ಸಹಿತ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಎಸ್.ಎ.ಟಿ. ಶಾಲಾ ಸಮೀಪದಲ್ಲಿ ಮಾರಾಟಕ್ಕೆ ಯತ್ನಿಸಿದ 2500 ಪ್ಯಾಕೆಟ್ ಪಾನ್‌ಮಸಾಲ ಸಹಿತ ಕಲ್ಲಿಕೋಟೆ ನಿವಾಸಿಯಾದ ಅಬ್ದುಲ್ ಸಲಾಂ(49) ಎಂಬಾತನನ್ನು ಬಂಧಿಸಲಾಗಿದೆ.

ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಸಂಶಯ ರೀತಿಯಲ್ಲಿ ಕಂಡುಬಂದ ಈತನನ್ನು ವಶಕ್ಕೆ ತೆಗೆದುಕೊಂಡು ತಪಾಸಣೆ ನಡೆಸಿದಾಗ 2 ಗೋಣಿ ಚೀಲಗಳಲ್ಲಿ ತುಂಬಿಸಿದ್ದ 2500 ಪ್ಯಾಕೆಟ್ ಪಾನ್ ಮಸಾಲವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಟ್ಟಿಪದವಿನಲ್ಲಿ ಎಸ್.ಐ. ಅನೂಪ್ ನೇತೃತ್ವದ ಕಾರ್ಯಾಚರಣೆಯಲ್ಲಿ  ಸ್ಥಳೀಯ ನಿವಾಸಿ ಮುಹಮ್ಮದ್.ಕೆ (44) ಎಂಬಿವರನ್ನು ಪಾನ್ ಮಸಾಲದೊಂದಿಗೆ ಬಂಧಿಸಿ ಬಳಿಕ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News