ಮುಹಮ್ಮದ್ ಮುಬೀನ್‌ರಿಗೆ ಡಾಕ್ಟರೇಟ್

Update: 2017-10-01 14:56 GMT

ಮಂಗಳೂರು, ಸೆ.29: ಮಣಿಪಾಲ ಕಾಲೇಜ್ ಆಫ್ ಫಾರ್ಮಸ್ಯುಟಿಕಲ್ ಸಯನ್ಸಸ್‌ನ ಫಾರ್ಮಸ್ಯುಟಿಕಲ್ ಕೆಮೆಸ್ಟ್ರಿ ವಿಭಾಗದ ಸಂಶೋಧನಾರ್ಥಿ ಮುಹಮ್ಮದ್ ಮುಬೀನ್‌ರಿಗೆ ಮಣಿಪಾಲ ವಿಶ್ವ ವಿದ್ಯಾನಿಲಯದ ಪಿಎಚ್‌ಡಿ ಪದವಿ ಲಭಿಸಿದೆ.

ಫಾರ್ಮಸ್ಯುಟಿಕಲ್ ಕೆಮೆಸ್ಟ್ರಿ ವಿಭಾಗದ ಪ್ರೊ.ಡಾ.ಸುವರ್ಣ ಜಿ.ಕಿಣಿ ಹಾಗೂ ಫಾರ್ಮಕಾಲಜಿ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಕೆ. ಶ್ರೀಧರ್ ಆರ್. ಪೈ ಅವರ ಮಾರ್ಗದರ್ಶನದಲ್ಲಿ ಡಿಸೈನ್, ಸಿಂಥೆಸಿಸ್ ಆ್ಯಂಡ್  ಆ್ಯಂಟಿ ಕ್ಯಾನ್ಸರ್ ಆ್ಯಕ್ಟಿಟಿ ಆಫ್ ನೋವೆಲ್ ಹೆಟಿರೋಸೈಕ್ಲಿಕ್ ಕಂಪೌಂಡ್ಸ್ ಆಸ್ ಎಪಿಡರ್ಮಲ್ ಗ್ರೋತ್ ಫ್ಯಾಕ್ಟರ್ ರಿಸಪ್ಟರ್ ಥೈರೋಸಿನ್ ಕೈನೇಸ್ ಇನ್‌ಬಿಟರ್ಸ್‌ ವಿಷಯದಲ್ಲಿ ರಚಿಸಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಈ ಪದವಿ ಲಭಿಸಿದೆ.

ಉಳ್ಳಾಲದ ಪಿ. ಅಬ್ಬಾಸ್ ಮತ್ತು ಆಮಿನಾ ದಂಪತಿಯ ಪುತ್ರನಾಗಿರುವ ಮುಬೀನ್ ಪ್ರಸ್ತುತ ಮಂಗಳೂರಿನ ಕರಾವಳಿ ಕಾಲೇಜು ಆಫ್ ಫಾರ್ಮಸಿಯಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News