ತುಳು ತರಗತಿಗೆ ಅರ್ಜಿ ಆಹ್ವಾನ
Update: 2017-09-29 06:26 GMT
ಮಂಗಳೂರು, ಸೆ.29: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯು ‘ಬಲೇ ತುಳು ಕಲ್ಪುಗ’ ಯೋಜನೆಯಡಿ ತುಳು ಭಾಷೆ ಬಾರದವರಿಗೆ ತುಳು ಮಾತನಾಡಲು ಕಲಿಸುವ ಸಲುವಾಗಿ ಉಚಿತ ತುಳು ಕಲಿಕಾ ತರಗತಿಯನ್ನು ಆಯೋಜಿಸುತ್ತಿದೆ. ಅಕಾಡಮಿಯ ಸಿರಿ ಚಾವಡಿಯಲ್ಲಿ ತರಗತಿಗಳನ್ನು ಅಭ್ಯರ್ಥಿಗಳ ಅನುಕೂಲದ ದಿನ ಮತ್ತು ಸಮಯಗಳಲ್ಲಿ ವ್ಯವಸ್ಥೆ ಮಾಡಲಾಗುವುದು.
ಆಸ್ತಕರು ಅಕಾಡಮಿಯ ಮೊ.ಸಂ: 9901016962ಗೆ ಎಸ್‌ಎಂಎಸ್ ಮೂಲಕ ಅಥವಾ ಅರ್ಜಿಗಳ ಮೂಲಕ ಅಕಾಡಮಿಗೆ ಅ.10ರ ಒಳಗಾಗಿ ಹೆಸರು ನೋಂದಾಯಿಸಿಕೊಳ್ಳುವಂತೆ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಮನವಿ ಮಾಡಿದ್ದಾರೆ.