ಪಡಿತರಕ್ಕಾಗಿ ಅಲೆದಾಟ: ಲೀಗ್ ಖಂಡನೆ

Update: 2017-09-29 06:30 GMT

ಮಂಗಳೂರು, ಸೆ.29: ಪಡಿತರ ಚೀಟಿಯ ಆಹಾರ ಸಾಮಗ್ರಿ ಪಡೆಯಲು ಗ್ರಾಹಕರು ಸರಕಾರದ ಅವೈಜ್ಞಾನಿಕ ನೀತಿಯಿಂದಾಗಿ ಪಡಿತರ ಚೀಟಿಯ ಅಂಗಡಿಗೆ ಅಲೆದಾಡಿದರೂ ಆಹಾರ ಸಾಮಗ್ರಿಗಳನ್ನು ಪಡೆಯಲಾಗದೆ ಮರಳುತ್ತಿದ್ದಾರೆ. ಸಮಸ್ಯೆ ಇಷ್ಟೊಂದು ಗಂಭೀರವಾಗಿದ್ದರೂ ಕೂಡ ಸಮಸ್ಯೆ ಪರಿಹಾರಕ್ಕೆ ಸರಕಾರ ಮೀನಮೇಷ ಎನಿಸುತ್ತಿದೆ ಎಂದು ಮುಸ್ಲಿಂ ಲೀಗ್‌ನ ಮಾಜಿ ಕಾರ್ಯದರ್ಶಿ ಮುಹಮ್ಮದ್ ಇಸ್ಮಾಯೀಲ್ ಖಂಡಿಸಿದ್ದಾರೆ.

ದಿನನಿತ್ಯ ಮಹಿಳೆಯರು, ವೃದ್ಧರು, ಮಕ್ಕಳು ಪಡಿತರ ಸಾಮಗ್ರಿಗೆ ಅಂಗಡಿಯ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಸರ್ವರ್ ಸಮಸ್ಯೆಯಿಂದಾಗಿ ನಾಲ್ಕೈದು ದಿನ ರಜೆ ಹಾಕುವಂತಹ ಪರಿಸ್ಥಿತಿಯೂ ಇದೆ. ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಸಚಿವ ಯು.ಟಿ.ಖಾದರ್ ವಿಫಲರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನ್ಯಾಯಬೆಲೆ ಅಂಗಡಿ ಸ್ಥಳಾಂತರಕ್ಕೆ ವಿರೋಧ: ಬಗರದ ಬಂದರ್‌ನಲ್ಲಿ ಸುಮಾರು 50 ವರ್ಷಕ್ಕಿಂತಲೂ ಅಧಿಕ ಕಾಲ ಕ್ರೆಸೆಂಟ್ ವೆಲ್‌ಫೇರ್ ಸ್ಟೋರ್ ಪಡಿತರ ಸಾಮಗ್ರಿಗಳ ವಿತರಣಾ ಕಾರ್ಯ ಮಾಡುತ್ತಿದೆ. ಇದೀಗ ತಾಂತ್ರಿಕ ನೆಪವೊಡ್ಡಿ ಈ ಸ್ಟೋರನ್ನು ಸ್ಥಳಾಂತರಕ್ಕೆ ಪ್ರಯತ್ನಿಸಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ಸಮಸ್ಯೆಯಾಗಲಿದೆ. ಹಾಗಾಗಿ ಈಗಿರುವ ಸ್ಥಳದಲ್ಲೇ ಪಡಿತರ ವಿತರಣೆಗೆ ಕ್ರಮ ಜರಗಿಸಬೇಕು ಎಂದು ಮುಹಮ್ಮದ್ ಇಸ್ಮಾಯೀಲ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News