ಅ.1: ಅಲ್ ಮದೀನ ಹಳೆ ವಿದ್ಯಾರ್ಥಿಗಳ ಸಮಾವೇಶ

Update: 2017-09-29 14:31 GMT

ನರಿಂಗಾನ, ಸೆ. 29: ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಜನಗೈದ ವಿದ್ಯಾರ್ಥಿಗಳ ಸಮಾವೇಶ 'ಅಲುಮ್ನಿ ಗ್ಯಾದರಿಂಗ್ 2017'  ಅ.1ರಂದು ಪೂರ್ವಾಹ್ನ 10 ಗಂಟೆಗೆ ಅಲ್ ಮದೀನದಲ್ಲಿ ನಡೆಯಲಿದೆ.

ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾವೇಶದಲ್ಲಿ ದೇಶ-ವಿದೇಶಗಳಲ್ಲಿ ಇರುವ ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಹಾಗೂ ಉಸ್ತಾದರ ಶಿಷ್ಯಂದಿರು ಭಾಗವಹಿಸಲಿದ್ದಾರೆ ಎಂದು ಅಲ್ ಮದೀನ ಓಲ್ಡ್ ಸ್ಟೂಡೆಂಟ್ಸ್ ಪ್ರತಿನಿಧಿ ಶರೀಫ್ ಸಅದಿ ಮೂಡುಬಿದಿರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News