ಹಿರಿಯಡಕ: ಎನ್ನಸ್ಸೆಸ್ ನಾಯಕತ್ವ ತರಬೇತಿ ಶಿಬಿರ

Update: 2017-09-30 15:21 GMT

ಉಡುಪಿ, ಸೆ.30: ಹಿರಿಯಡಕದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಎನ್ನೆಸ್ಸೆಸ್ ನಾಯಕತ್ವ ತರಬೇತಿ ಮತ್ತು ಅಭಿವಿನ್ಯಾಸ ಕಾರ್ಯಕ್ರಮವನ್ನು ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ರಾ.ಸೇವಾ ಯೋಜನಾಧಿಕಾರಿ ಹಾಗೂ ಎನ್ನೆಸ್ಸೆಸ್ ಯೋಜನಾಧಿಕಾರಿ, ರಾಜ್ಯ ಪ್ರಶಸ್ತಿ ವಿಜೇತೆ ಸವಿತಾ ಎರ್ಮಾಳ್ ಉದ್ಘಾಟಿಸಿದರು.

ರಾಷ್ಟ್ರೀಯ ಸೇವಾ ಯೋಜನೆ ವ್ಯಕ್ತಿತ್ವ ನಿರ್ಮಾಣದ ಮೈಲುಗಲ್ಲು. ವ್ಯಕ್ತಿಯ ಪ್ರಾಮಾಣಿಕ ಪ್ರಯತ್ನ ತನ್ನ ಹಾಗೂ ಇತರರ ಬಗೆಗಿನ ವಿಶ್ವಾಸ ಮತ್ತು ಪ್ರೀತಿ ಸಮಾಜವನ್ನು ಹಾಗೂ ವ್ಯಕ್ತಿಯನ್ನು ಉನ್ನತ್ತಿಗೇರಿಸುವುದು. ರಚನಾತ್ಮಕ ವ್ಯಕ್ತಿತ್ವ ವಿಕಸನ ಎನ್ನೆಸ್ಸೆಸ್ ಮೂಲಕ ಸಾಧ್ಯ ಎಂದು ಅವರು ಹೇಳಿದರು.
 ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಜಿ.ಆರ್.ರಾಯ್ಕರ್ ವಹಿಸಿ ದ್ದರು.ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ನಿಕೇತನ ಎನ್ನೆಸ್ಸೆಸ್ ರೂಪುರೇಷೆಗಳ ಬಗ್ಗೆ, ವ್ಯಕ್ತಿತ್ವ ವಿಕಸನದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಯೋಜನಾಧಿಕಾರಿಗಳಾದ ಪ್ರೊ. ಪ್ರವೀಣ ಶೆಟ್ಟಿ ಎನ್ನೆಸ್ಸೆಸ್ ಮೂಲಕ ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವದ ಬಗ್ಗೆ ಉಪನ್ಯಾಸ ನೀಡಿದರು. ಅನುಷ ಸ್ವಾಗತಿಸಿ, ಸಂಧ್ಯಾ ವಂದಿಸಿದರು. ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News