ಅ.2ರಂದು ‘ರತ್ನಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ

Update: 2017-09-30 15:35 GMT

ಉಡುಪಿ, ಸೆ.30: ಕರ್ನಾಟಕ ಕ್ರೈಸ್ತ ಸಂಘಟನೆಗಳ ಅಂತಾರಾಷ್ಟ್ರೀಯ ಒಕ್ಕೂಟ (ಇಫ್ಕಾ)ಉಡುಪಿ ಹಾಗೂ ಬಿಗ್‌ಜೆ ಮೀಡಿಯಾ ನೆಟ್‌ವರ್ಕ್‌ನ ಮಿಶನ್ ಕಂಪೌಂಡ್ ಉಡುಪಿ ಇವುಗಳ ಜಂಟಿ ಆಶ್ರಯದಲ್ಲಿ ಕ್ರೈಸ್ತ ಸಮುದಾಯದ 10 ಮಂದಿ ಸಾಧಕರಿಗೆ ‘ರತ್ನಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭವು ಅ.2ರಂದು ಉಡುಪಿ ಬಾಸೆಲ್ ಮಿಶನರಿ ಮೆಮೋರಿಯಲ್ ಅಡಿಟೋರಿಯಂನಲ್ಲಿ ಜರಗಲಿದೆ.

 ಕುಂದಾಪುರದ ವಾಲೇಟ್ ಬಾರೆಟ್ಟೊ(ರಾಜಕೀಯ), ಕಲ್ಯಾಣಪುರದ ಜೋಸೆಫ್ ಜಿ.ಎಂ.ರೆಬೆಲ್ಲೊ(ಸಮಾಜ ಸೇವೆ), ಉಡುಪಿಯ ಸಿಸ್ಟರ್ ರೋಸ್ ಆಗ್ನೆಸ್ ಎ.ಸಿ.(ಶಿಕ್ಷಣ), ಉಡುಪಿಯ ಡಾ.ಸುಶೀಲ್ ಜತ್ತನ್ನ(ಆರೋಗ್ಯ), ಉಡುಪಿಯ ರ್ಯಾನ್ಸಿ ಕರ್ಕಡ(ಕ್ರೀಡೆ), ಉಡುಪಿಯ ಫಾ.ಚೇತನ್ ಲೋಬೊ ಕಾಪುಚಿನ್(ಪತ್ರಿಕೋದ್ಯಮ/ಸಾಹಿತ್ಯ), ಕಾರ್ಕಳದ ಜೋನ್ ಆರ್.ಡಿಸಿಲ್ವ (ಉದ್ಯಮಿ), ಉಡುಪಿಯ ಸರಳ ಲಿಲ್ಲಿಯನ್ ಸೋನ್ಸ್(ಸಾಂಸ್ಕೃತಿಕ/ಸಂಗೀತ), ಪಲಿಮಾರಿನ ಮಾಸ್ಟರ್ ಲಾರೆನ್ ಪಿಂಟೋ(ಕಲೆ), ಮಲ್ಪೆಯ ದೋನಾತ್ ಡಿ ಅಲ್ಮೇಡಾ ತೊಟ್ಟಂ(ಸಾಹಿತ್ಯ/ಪತ್ರಿಕೋದ್ಯಮ) ಅವರು ಪ್ರಶಸ್ತಿಗೆ ಆಯ್ಕೆಯಾಗಿ ದ್ದಾರೆ ಎಂದು ಇಫ್ಕಾ ಅಧ್ಯಕ್ಷ ಪ್ರಶಾಂತ್ ಜತ್ತನ್ನ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಬಳಿಕ ಬಿಗ್ ಜೆ ಪ್ರಾಯೋಜಕತ್ವದಲ್ಲಿ ಕ್ರಿಶ್ಚಿಯನ್ ಗೋಸ್ಪೆಲ್ ಸಿಂಗಿಂಗ್ ಟಾಲೆಂಟ್ ಹಂಟ್ ಇದರ ಪ್ರಶಸ್ತಿ ಪ್ರದಾನ ಸಮಾರಂಭ ‘ಆವಾರ್ಡ್ ನೈಟ್’ ನಡೆಯಲಿದೆ. ಈ ಎರಡೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಾಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ವಹಿಸಲಿರುವರು. ಮುಖ್ಯ ಅತಿಥಿ ಗಳಾಗಿ ಸಚಿವ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಕಾಪು ಶಾಸಕ ವಿನಯ ಕುಮಾರ್ ಸೊರಕೆ ಭಾಗವಹಿಸ ಲಿರುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಸಮಿತಿಯ ಸಂಚಾಲಕ ಲೂವಿಸ್ ಲೋಬೊ, ಇಫ್ಕಾ ಕಾರ್ಯದರ್ಶಿ ಡಾ.ನೇರಿ ಕರ್ನೆಲಿಯೊ, ಜೀತೇಂದ್ರ ಫುಟಾರ್ಡೊ, ಶೈಲಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News