ಬಂಟ್ವಾಳ: ಮಾತೃಪೂರ್ಣ ಯೋಜನೆಗೆ ಚಾಲನೆ

Update: 2017-10-02 09:54 GMT

ಬಂಟ್ವಾಳ, ಅ. 2: ಅಂಗನವಾಡಿಗಳಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಪೌಷ್ಟಿಕ ಆಹಾರ ಬಿಸಿ ಊಟ ನೀಡುವ ‘ಮಾತೃಪೂರ್ಣ’ ಯೋಜನೆಗೆ  ಇಂದು ಮಧ್ಯಾಹ್ನ 2 ಗಂಟೆಗೆ  ಬಂಟ್ವಾಳ ತಾಲೂಕಿನ ನರಿಕೊಂಬು ಅಂಗನವಾಡಿಯಲ್ಲಿ ಅರಣ್ಯ ಸಚಿವ ಬಿ. ರಮಾನಾಥ ರೈ ಚಾಲನೆ ನೀಡಿದರು.

ಈ ಯೋಜನೆಯಲ್ಲಿ ಗಭಿ೯ಣಿಯೆಂದು ಗುರುತಿಸಿದಲ್ಲಿಂದ 100 ದಿನಗಳವರೆಗೆ ಮಧ್ಯಾಹ್ನ ಅನ್ನಸಾರು, ಬೇಯಿಸಿದ ಮೊಟ್ಟೆ, ಹಾಲು ಮತ್ತು ನೆಲಕಡಲೆ ಚಿಕ್ಕಿ ಒಳಗೊಂಡ ಪೌಷ್ಟಿಕ ಆಹಾರವನ್ನು ಪ್ರತಿ ದಿನ ನೀಡಲಾಗುತ್ತದೆ.

ಇದಲ್ಲದೇ, ದಿನಕ್ಕೊಂದರಂತೆ 100 ದಿನ ಕಬ್ಬಿಣಾಂಶದ ಮಾತ್ರೆ,  2ನೆ ತ್ರೈಮಾಸಿಕದಲ್ಲಿ ಜಂತುಹುಳ ಮಾತ್ರೆ, ಪ್ರಸವ ಪೂರ್ವ ಮತ್ತು ನಂತರ ಆಪ್ತ ಸಮಾಲೋಚನೆ, ಮುಂಜಾಗೃತೆ ಕ್ರಮ ಈ ಯೋಜನೆಯಲ್ಲಿ ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News