ಎಸ್‌ಕೆಎಫ್ ಎಲಿಕ್ಸರ್ ಕುಡಿಯುವ ನೀರಿನ ಪ್ಲಾಂಟ್: ಅ. 4ರಂದು ಕಾರ್ಕಳದಲ್ಲಿ ಪ್ರಚಾರ ಅಭಿಯಾನ

Update: 2017-10-02 10:39 GMT

ಕಾರ್ಕಳ, ಅ.2: ಅವರವರ ಜಲಮೂಲಗಳಿಂದ ಶುದ್ಧ ಖನಿಜಯುಕ್ತ ಕುಡಿಯುವ ನೀರನ್ನೊದಗಿಸುವ ಎಸ್‌ಕೆಎಫ್ ಎಲಿಕ್ಸರ್ ವಾಟರ್ ಪ್ಯೂರಿಫೈಯರ್ ಪ್ಲಾಂಟ್‌ನ ಬಗ್ಗೆ ಪ್ರಚಾರ ಅಭಿಯಾನ ಅ.4 ರಂದು ಬೆಳಿಗ್ಗೆ 10:30ಕ್ಕೆ ಕಾರ್ಕಳದ ಬಸ್ ನಿಲ್ದಾಣದ ಬಳಿ ನಡೆಯಲಿದೆ.

ಕಾರ್ಕಳ ಪುರಸಭೆ ಅಧ್ಯಕ್ಷೆ ಅನಿತಾ ಆರ್. ಅಂಚನ್, ಸದಸ್ಯ ಅಶ್ಫಕ್ ಅಹ್ಮದ್, ಕಾರ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷ ವಲೇರಿಯನ್ ಮಥಾಯಿಸ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.

ಎಲಿಕ್ಸರ್ ಹೊಸ ಎತ್ತರಗಳನ್ನು ಏರುತ್ತಾ ರಾಜ್ಯದಾದ್ಯಂತ ಎಲಿಕ್ಸರ್ ಪ್ಲಾಂಟ್ ಕಾರ್ಯರಂಭಗೊಳ್ಳುತ್ತಿದ್ದು ಶ್ರೇಷ್ಠ ಗುಣಮಟ್ಟದ ಸೇವೆ ನೀಡುತ್ತಿದೆ. ಎಲಿಕ್ಸರ್ ಕಂಟ್ರೋಲ್ ತಂತ್ರಜ್ಞಾನವು ನೀರಿನಲ್ಲಿರುವ ಕಶ್ಮಲಗಳನ್ನೆಲ್ಲಾ ನಿವಾರಿಸಿ ನೀರಿನ ಮಟ್ಟವನ್ನು ಸಹಜ ಖನಿಜಯುಕ್ತ ನೀರಿನ ಮಟ್ಟಕ್ಕೆ ತಂದು ನಿಮ್ಮದೇ ಜಲಮೂಲದಿಂದ, ಶೇಕಡಾ 100, ಪರಿಶುದ್ಧ ಖನಿಜಯುಕ್ತ ರುಚಿಕರ ಕುಡಿಯುವ ನೀರನ್ನು ನಿಮಗೆ ಒದಗಿಸುತ್ತದೆ. ತನ್ಮೂಲಕ ನಮ್ಮ ಪರಿಸರ ಪ್ಲಾಸ್ಟಿಕ್ ಬಾಟಲಿಗಳಿಂದ ಕಲುಷಿತವಾಗುವುದನ್ನು ತಡೆದು ಸುಂದರ, ಸ್ವಚ್ಛ ಹಸಿರು ಪರಿಸರವನ್ನು, ಸ್ವಚ್ಛ ಭಾರತವನ್ನು ನಿರ್ಮಿಸಲೂ ಸಹಾಯ ಮಾಡುತ್ತದೆ.

ಭಾರತೀಯರಿಗೆ ಖನಿಜಯುಕ್ತ ಕುಡಿಯುವ ನೀರನ್ನು ಒದಗಿಸುವ ಎಸ್.ಕೆ.ಎಫ್ ಎಲಿಕ್ಸರ್ ಇಂಡಿಯದ ಅಭಿಯಾನವನ್ನು ಸಂಸ್ಥೆಯು ಹೊಂದಿದೆ ಎಂದು ಆಡಳಿತ ನಿರ್ದೇಶಕ ಜಿ.ರಾಮಕೃಷ್ಣ ಆಚಾರ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News