ಹೋರಾಟಕ್ಕೆ ಅಹಿಂಸೆ, ಸತ್ಯಾಗ್ರಹವೇ ಪ್ರಬಲ ಅಸ: ಡಾ.ಶ್ಯಾನುಭಾಗ್

Update: 2017-10-02 17:03 GMT

ಉಡುಪಿ, ಅ.2: ಪ್ರಜಾಪ್ರಭುತ್ವದಲ್ಲಿ ಅನ್ಯಾಯ, ಅಸಮಾನತೆಗಳ ವಿರುದ್ಧ ಹೋರಾಡಲು ಗಾಂಧೀಜಿ ಪ್ರತಿಪಾದಿಸಿದ ಅಹಿಂಸೆ ಹಾಗೂ ಸತ್ಯಾಗ್ರಹವೇ ಪ್ರಬಲ ಅಸಗಳಾಗಿವೆ ಎಂದು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್ ಹೇಳಿದ್ದಾರೆ.

ಮಣಿಪಾಲದ ಟ್ಯಾಪ್ಮಿ ಹಳೆ ಕಟ್ಟಡದ ಸಭಾಂಗಣದಲ್ಲಿ ಮಣಿಪಾಲ ವಿವಿಯ ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರದ ವತಿಯಿಂದ ಗಾಂಧಿ ಜಯಂತಿ ಸಂದರ್ಭದಲ್ಲಿ ಹಮ್ಮಿಕೊಳ್ಳಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಹೋರಾಟ ಮತ್ತು ಪತ್ರಿಕೋದ್ಯಮದಲ್ಲಿ ನನ್ನ ಪ್ರಯೋಗಗಳು’ ಎಂಬ ವಿಷಯದ ಕುರಿತು ಅವರು ಮಾತನಾಡುತಿದ್ದರು.

24ನೇ ವಯಸ್ಸಿಗೆ ಹೋರಾಟದ ಚಿಂತನೆ ಮೂಡಲು ಜಯಪ್ರಕಾಶ್ ನಾರಾಯಣ್ ಕುರಿತು ಏನೂ ಗೊತ್ತಿಲ್ಲದಿದ್ದರೂ ತುರ್ತು ಪರಿಸ್ಥಿತಿ ಸಂದರ್ಭ ವಿದೇಶಕ್ಕೆ ತೆರಳಬೇಕಿದ್ದ ನನ್ನನ್ನು ಮೂರು ತಿಂಗಳ ಕಾಲ ಅನಗತ್ಯವಾಗಿ ಜೈಲಿಗೆ ತಳ್ಳಿದ್ದು, ಕಾಸರಗೋಡಿನಿಂದ ಮಂಗಳೂರಿಗೆ ಟಿಕೆಟ್ ರಹಿತನಾಗಿ ಬಂದು 11 ವರ್ಷಗಳಿಂದ ಜೈಲಲ್ಲಿ ಕೊಳೆಯುತ್ತಿದ್ದ ವಿಠಲ ಕಾಸರಗೋಡು ಎಂಬವರು ಪ್ರೇರಣೆಯಾಗಿದ್ದಾರೆ ಎಂದು ಡಾ.ಶ್ಯಾನುಭಾಗ್ ವಿವರಿಸಿದರು.

1980ರಲ್ಲಿ ಬಸ್ರೂರು ಬಳಕೆದಾರರ ವೇದಿಕೆ ಮೂಲಕ 8,000 ದೂರು ಸ್ವೀಕರಿಸಿದರೆ, ಬಳಿಕ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಸ್ಥಾಪಿಸಿ 36,000ಕ್ಕೂ ಅಧಿಕ ಪ್ರಕರಣ ನಿಭಾಯಿಸಲು ಗಾಂಧಿ ತೆರಿಸಿಕೊಟ್ಟ ಹಾದಿ ಹಿಡಿದ್ದೇನೆ ಎಂದರು.

ಅನ್ಯಾಯ, ಅಸಮಾನತೆಯ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದರೆ ಸಾಲದು, ಪರಿಹಾರ ಹಾದಿಯನ್ನೂ ತೋರಿಸಬೇಕು. ಪ್ರಜಾಪ್ರಭುತ್ವದ ನೆಲೆಯಲ್ಲಿ ಗಾಂಧಿ ತತ್ವದ ಶಕ್ತಿಯೇ ನ್ಯಾಯದ ಹಾದಿಯಲ್ಲಿ ಹೋರಾಟವನ್ನು ಮುನ್ನಡೆಸುತ್ತಿದೆ ಎಂದು ನುಡಿದ ಅವರು, ಹೋರಾಟಕ್ಕೆ ಬೇಕಿರುವುದು ಹಣವಲ್ಲ, ಪ್ರಬಲ ಇಚ್ಛಾಶಕ್ತಿ. ಅಪರಾಧವನ್ನು ದ್ವೇಷಿಸಿ,  ಆದರೆ ಅಪರಾಧಿ ಯನ್ನಲ್ಲ ಎಂದರು.
ಮಣಿಪಾಲ ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ರದೇಶ್ ಹಿರೇಗಂಗೆ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News