ಲೇಡಿಗೋಶನ್ ಆಸ್ಪತ್ರೆಯ ಆವರಣ ಗೋಡೆ ಕುಸಿತ: ಓರ್ವನಿಗೆ ಗಾಯ

Update: 2017-10-03 05:52 GMT

ಮಂಗಳೂರು, ಅ.3: ನಗರದ ಲೇಡಿಗೋಶನ್ ಆಸ್ಪತ್ರೆಯ ಆವರಣ ಗೋಡೆ ಕುಸಿದು ಓರ್ವ ಕೂಲಿ ಕಾರ್ಮಿಕ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.
 ಕೂಲಿ ಕಾರ್ಮಿಕ ಮುಸ್ತಫ ಎಂಬವರ ಕಾಲಿಗೆ ಗಾಯವಾಗಿದ್ದು, ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಸೆಂಟ್ರಲ್ ಮಾರ್ಕೆಟ್ ಬೇಕರಿಯೊಂದರ ಮುಂಭಾಗದ ಎದುರು ಆಸ್ಪತ್ರೆಯ ಆವರಣ ಗೋಡೆ ಕುಸಿದಿದೆ. ಆವರಣ ಗೋಡೆಯ ಕಲ್ಲುಗಳು ಮುಸ್ತಫರ ಕಾಲಿಗೆ ಬಿದ್ದುದರಿಂದ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ವೇಳೆ ಲಾರಿಯೊಂದರ ಮೇಲೂ ಕಲ್ಲುಗಳು ಬಿದ್ದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News