​ಸುನ್ನೀ ಮಹಲ್ ಯುಎಇ: ಪದಾಧಿಕಾರಿಗಳ ಆಯ್ಕೆ

Update: 2017-10-03 07:53 GMT

ಶಾರ್ಜಾ, ಅ.3: ಸುನ್ನೀ ಮಹಲ್ ಯುಎಇ ಇದರ ವಾರ್ಷಿಕ ಮಹಾಸಭೆಯು ಶಾರ್ಜಾದಲ್ಲಿ ಇತ್ತೀಚೆಗೆ ನಡೆಯಿತು.
ಎಣ್ಮೂರಿನ ಉಸ್ತಾದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಸಮಿತಿಯ ನೂತನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

 ಗೌರವಾಧ್ಯಕ್ಷರಾಗಿ ಸಿರಾಜ್ ಮುಸ್ಲಿಯಾರ್, ಅಧ್ಯಕ್ಷರಾಗಿ ಖಾದರ್ ಮಂಚಿ, ಉಪಾಧ್ಯಕ್ಷರಾಗಿ ದಾವೂದ್ ಕೈಯೂರ್, ಫಾರೂಕ್ ಬಾಲಾಜಿಬೈಲ್, ಮುಸ್ತಫ ಕೈಯೂರ್, ಕಾರ್ಯದರ್ಶಿಯಾಗಿ ತೌಸಿಫ್ ಕೈಯೂರ್, ಜೊತೆ ಕಾರ್ಯದರ್ಶಿಯಾಗಿ ಶರೀಫ್, ಫಾರೂಕ್ ಮಂಚಿ, ಸಂಘಟನಾ ಕಾರ್ಯದರ್ಶಿಯಾಗಿ ಶರೀಫ್, ರಫೀಕ್, ನಿರ್ದೇಶಕರಾಗಿ ಹನೀಫ್ ಕುಲ್ಯಾರ್, ಶರೀಫ್ ತಾಲಿತ್ತನೂಜಿ ಹಾಗೂ ಇತರ ಸದಸ್ಯರನ್ನು ಆಯ್ಕೆ ಮಾಡಲಾಯಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News