ಅಡಿಗರು ಜನಾಂಗದ ಕಣ್ಣು ತೆರೆಸಿದ ಕವಿ: ಡಾ.ರಾಜೇಂದ್ರ ನಾಯಕ್

Update: 2017-10-03 14:20 GMT

ಉಡುಪಿ, ಅ.3: ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಸುವಿಚಾರ ಬಳಗ, ಕುಂದ ಅಧ್ಯಯನ ಕೇಂದ್ರ ಉಪ್ಪುಂದ ಹಾಗೂ ಸಿರಿಮೊಗೇರಿ ಸಮಷ್ಟಿ ವೇದಿಕೆಗಳ ಸಹಯೋಗದಲ್ಲಿ ಕವಿ ಎಂ.ಗೋಪಾಲಕೃಷ್ಣ ಅಡಿಗರ ನೂರನೆ ಜನ್ಮದಿನದ ಆಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭ ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕೋಟೇಶ್ವರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ನಾಯಕ್ ಅಡಿಗರ ಬದುಕು ಮತ್ತು ಬರಹಗಳ ಕುರಿತು ಮಾತ ನಾಡಿ, ಜನಾಂಗದ ಕಣ್ಣು ತೆರೆಸಿದ ಕವಿಯಾದ ಅಡಿಗರು ನುಡಿದಂತೆ ನಡೆದವರು. ಅಡಿಗರ ಕನಸು-ಕಲ್ಪನೆಗಳು ವಾಸ್ತವದ ಮಣ್ಣಿನ ಸೊಗಡಿನೊಂದಿಗೆ ಕೂಡಿಕೊಂಡು ಬದುಕಿಗೆ ಬೇಕಾದ ಜೀವನ ಮೌಲ್ಯಗಳನ್ನು ಉದ್ದೀಪನಗೊಳಿ ಸುತ್ತವೆ ಎಂದು ಹೇಳಿದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಉಪ್ಪುಂದ ಚಂದ್ರ ಶೇಖರ ಹೊಳ್ಳ ಸಮಾರೋಪ ಭಾಷಣ ಮಾಡಿ, ವರ್ತಮಾನಕ್ಕೆ ಸ್ಪಂದಿಸುತ್ತ ಜೀವನವು ನಿತ್ಯನೂತನವಾಗಿದ್ದರೆ ಮಾನವ ದಿವ್ಯತ್ವದ ಕಡೆಗೆ ಸಾಗಲು ಸಾಧ್ಯವಿದೆ. ಸಮಗ್ರವಾದ, ಸ್ವಾದಿಷ್ಟವಾದ ನಾನಾ ವಿಚಾರಗಳಿಂದ ತುಂಬಿರುವ ಅಡಿಗರ ಸಾಹಿತ್ಯದಲ್ಲಿ ವಿಶೇಷ ದರ್ಶನವನ್ನು ಕಂಡುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ವಹಿಸಿದ್ದರು. ಸಿರಿಮೊಗೇರಿ ಸಮಷ್ಟಿ ವೇದಿಕೆಯ ನಿರ್ದೇಶಕ ಎಂ.ಜಯರಾಮ ಅಡಿಗ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಹರಿಣಾಕ್ಷಿ ಎಂ.ಡಿ. ಸ್ವಾಗತಿಸಿದರು. ಉಪನ್ಯಾಸಕ ನಿತ್ಯಾನಂದ ಶೆಟ್ಟಿ ವಂದಿಸಿ ದರು. ಉಪನ್ಯಾಸಕ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News