‘ಸೇನಾಪುರ ರೈಲ್ವೆ ನಿಲ್ದಾಣದ ಅಭಿವೃದ್ದಿಗಾಗಿ ಹೋರಾಟ’

Update: 2017-10-03 15:54 GMT

ಉಡುಪಿ, ಅ.3: ಕೊಂಕಣ ರೈಲ್ವೆಯ ಸೇನಾಪುರ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳು ನಿಲ್ಲಬೇಕೆಂಬ ಬೇಡಿಕೆ ಇದ್ದು, ಸದ್ಯಕ್ಕೆ ಬೈಂದೂರಿನ ಈ ರೈಲು ನಿಲ್ದಾಣ ಸಮಸ್ಯೆಗಳ ಆಗರವಾಗಿದೆ. ಸೇನಾಪುರ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಅಲ್ಲಿನ ಸ್ಥಳೀಯರು ಆಸಕ್ತರಾಗಿದ್ದಲ್ಲಿ ಅವರ ಜೊತೆ ಕೈಜೋಡಿಸಲು ಸಿದ್ಧ ಎಂದು ಉಡುಪಿ ರೈಲ್ವೆ ಯಾತ್ರಿಕರ ಸಂಘದ ಅಧ್ಯಕ್ಷ ಆರ್.ಎಲ್.ಡಯಾಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೇನಾಪುರದಲ್ಲಿ ಎರಡನೇ ಪ್ಲಾಟಫಾರ್ಮ್ ಇಲ್ಲ. ಹೀಗಾಗಿ ರೈಲು ಎರಡನೇ ಹಾಲಿಗೆ ಬಂದಾಗ ರೈಲು ಹತ್ತಲು ಹಿರಿಯ ನಾಗರಿಕರು, ಮಗುವನ್ನು ಎತ್ತಿಕೊಂಡ ತಾಯಿ, ಅಂಗವಿಕಲರು, ಮಹಿಳೆಯರು ತೊಂದರೆ ಪಡಬೇಕಾದ ಪರಿಸ್ಥಿತಿ ಇದೆ ಎಂದವರು ಹೇಳಿದ್ದಾರೆ.

ಸೇನಾಪುರದಲ್ಲಿ ಹೆಚ್ಚುವರಿ ರೈಲು ನಿಲ್ಲಲು ಹಲವು ಅಭಿವೃದ್ಧಿ ಕಾರ್ಯಗಳು ಆಗಬೇಕಿವೆ. ಇವುಗಳಲ್ಲಿ ಎರಡನೇ ಪ್ಲಾಟಫಾರಂ ನಿರ್ಮಾಣ, ಮೇಲು ಸೇತುವೆ ನಿರ್ಮಾಣ, ನಿಲ್ದಾಣದ ಪೂರ್ವ ದಿಕ್ಕಿನಲ್ಲಿರುವ ಪ್ರದೇಶವನ್ನು ಸಮತಟ್ಟು ಮಾಡಿ ರಿಕ್ಷಾ ಟ್ಯಾಕ್ಸಿ ಸ್ಟಾಂಡ್‌ಗಳ ನಿರ್ಾಣ ಸೇರಿವೆ ಎಂದವರು ತಿಳಿಸಿದ್ದಾರೆ.

ಸೇನಾಪುರದಲ್ಲಿ ಹೆಚ್ಚುವರಿ ರೈಲು ನಿಲ್ಲಲು ಹಲವು ಅಭಿವೃದ್ಧಿ ಕಾರ್ಯಗಳು ಆಗಬೇಕಿವೆ. ಇವುಗಳಲ್ಲಿ ಎರಡನೇ ಪ್ಲಾಟಫಾರಂ ನಿರ್ಮಾಣ, ಮೇಲು ಸೇತುವೆ ನಿರ್ಮಾಣ, ನಿಲ್ದಾಣದ ಪೂರ್ವ ದಿಕ್ಕಿನಲ್ಲಿರುವ ಪ್ರದೇಶವನ್ನು ಸಮತಟ್ಟು ಮಾಡಿ ರಿಕ್ಷಾ ಟ್ಯಾಕ್ಸಿ ಸ್ಟಾಂಡ್‌ಗಳ ನಿರ್ಮಾಣ ಸೇರಿವೆ ಎಂದವರು ತಿಳಿಸಿದ್ದಾರೆ. 90ರ ದಶಕದಲ್ಲಿ ಗುಡ್ಡೆ ಅಂಗಡಿ ಪೇಟೆಯ ಬದಿಯಲ್ಲಿ ಹಳಿ ಹಾಕುವ ಸರ್ವೇ ನಡೆದಾಗ ಅದಕ್ಕೆ ಜನರಿಂದ ವಿರೋಧ ಎದುರಾಗಿತ್ತು. ರೈಲು ಬಂದರೆ ಕಳ್ಳರು ಬರುತ್ತಾರೆ ಎಂದು ಕೂಗೆಬ್ಬಿಸಿದ ಕಾರಣ, ರೆೈಲ್ವೆ ಲೈನ್ 5 ಕಿ.ಮೀ. ಪೂರ್ವದಲ್ಲಿ ಹೋಗುವಂತಾಯಿತು. ಇದರ ಫಲವಾಗಿ ಈಗ ಉಡುಪಿಯಿಂದ ಸೇನಾಪುರಕ್ಕೆ ರೈಲು ಟಿಕೆಟ್ ದರ 15 ರೂ. ಇದ್ದರೆ, ಅಲ್ಲಿ ಇಳಿದು ಗುಡ್ಡೆಅಂಗಡಿಗೆ ಹೋಗಲು 80 ರೂ. ಖರ್ಚು ಮಾಡಬೇಕಾದ ರಿಸ್ಥಿತಿ ಇದೆ ಎಂದವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News