ತೊಕ್ಕೊಟ್ಟು: ಝುಬೈರ್ ಕೊಲೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

Update: 2017-10-06 17:22 GMT

ಉಳ್ಳಾಲ, ಅ. 6: ರಾಜ್ಯ ಕೊಲೆಗಡುಕ ರಾಜ್ಯವಾಗಿ ಪರಿವರ್ತನೆಯಾಗುತ್ತಿದೆ. ಜಿಲ್ಲೆಯಲ್ಲಿ ಮಾದಕದ್ರವ್ಯ ಮಾರಾಟಗಾರರಿಗೆ ಮತ್ತು ರೌಡಿಗಳಿಗೆ ಸಹಕಾರ ನೀಡುವ ಮೂಲಕ ಪೊಲೀಸರಿಗೆ ಕರ್ತವ್ಯ ನಡೆಸಲು ಅಡ್ಡಿ ಪಡಿಸಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಅಲ್ಲಲ್ಲಿ ಚೂರಿ ಇರಿತ ಕೊಲೆಗಳಾಗುತ್ತಿವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಆರೋಪಿಸಿದರು.

ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಕಾಂಗ್ರೆಸ್‌ನ ದುರಾಡಳಿತ, ಸಚಿವ ಖಾದರ್ ಅವರ ಅಸಮರ್ಥತನದ ವಿರುದ್ಧ ಬಿಜೆಪಿ ಕಾರ್ಯಕರ್ತ ಝುಬೈರ್ ಹತ್ಯೆ ವಿರೋಧಿಸಿ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕೋಮು ಸೌಹಾರ್ದ ಇದ್ದ ಜಿಲ್ಲೆಯನ್ನು ಕಾಂಗ್ರೆಸ್ ಸಿದ್ದರಾಮಯ್ಯ ಆಡಳಿತಕ್ಕೆ ಬಂದ ನಂತರ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಯನ್ನು ಕದಡಲಾಗುತ್ತಿದೆ. ಒಂದು ವರ್ಗ, ಕೊಲೆಗಡುಕರನ್ನು, ಮಾದಕ ದ್ಯವ್ಯ ಆರೋಪಿಗಳನ್ನು ಓಲೈಸುವುದರಿಂದ ಸ್ಥಾನ ಭದ್ರವಾಗಿ ಉಳಿಯಲು ಸಾಧ್ಯ ಎನ್ನುವ ನಿಟ್ಟಿನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇಂತವರಿಗೆ ಬೆಂಬಲ ನೀಡುವ ಮೂಲಕ ಪೊಲೀಸರನ್ನು ನಿಯಂತ್ರಿಸುವ ಕಾರ್ಯ ಕಾಂಗ್ರೆಸ್ ಆಡಳಿತದಿಂದ ಆಗುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ ಝುಬೈರ್ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿಲ್ಲ ಅದರೇ ಅವರ ಹೆಸರಲ್ಲಿ ಒಂದೇ ಒಂದು ಕೇಸು ದಾಖಲೆಯಾಗಿಲ್ಲ ಆದರೆ ಕಾಂಗ್ರೆಸ್ ಮುಖಂಡ ಜಿ.ಎ. ಬಾವಾ ಅವರು ಝುಬೈರ್ ರೌಡಿ ಶೀಟರ್ ಎನ್ನುವ ಪಟ್ಟ ನೀಡುತ್ತಾರೆ. ಇದರ ವಿರುದ್ಧ ಮಾಹಿತಿ ಹಕ್ಕಿನಲ್ಲಿ ಹಾಕಿ ಪ್ರಕರಣ ದಾಖಲಿಸುತ್ತೇವೆ ಎಂದರು.

ಮಂಗಳೂರು ಕ್ಷೇತ್ರದಲ್ಲಿ ಓಟಿಗಾಗಿ ಗಾಂಜಾ ವ್ಯವಸನಿಗಳನ್ನು ಪೋಷಿಸಲಾಗುತ್ತಿದ್ದು, ಇವರಿಂದ ಹಾಡುಹಗಲೇ ಕೊಲೆ ನಡೆಯುತ್ತಿದೆ. ಇವರನ್ನು ಕ್ಷೇತ್ರದ ಶಾಸಕ ಯು.ಟಿ. ಖಾದರ್ ಬೆಂಬಲ ನೀಡುತ್ತಿದ್ದಾರೆ. ಆದರೆ ಉಳ್ಳಾಲ ಪೊಲೀಸರು ಅಸಮರ್ಥರಲ್ಲ ಆರೋಪಿಗಳನ್ನು ತಡವಾದರೂ ಸರಿ ಪೊಲೀಸರೇ ಬಂಧಿಸಲಿ ಬಳಿಕ ಅವರಿಗೆ ಕಠಿಣ ಶಿಕ್ಷೆ ನೀಡಲಿ ಎಂದರು.

ಬಿಜೆಪಿ ರಾಜ್ಯ ಸಹ ವಕ್ತಾರೆ ಸುಲೋಚನಾ ಭಟ್ , ಮಾಜಿ ಶಾಸಕ ಜಯರಾಮ ಶೆಟ್ಟಿ, ಮಂಗಳೂರು ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಹಿರಿಯ ಮುಖಂಡ ಟಿ.ಜಿ.ರಾಜಾರಾಮ್ ಭಟ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಉಪಾಧ್ಯಕ್ಷ ನಿತಿನ್ ಕುಮಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ರಾಮಚಂದ್ರ ಕುಂಪಲ, ರವಿಶಂಕರ್, ನವೀನ್ ಪಾದಲ್ಪಾಡಿ, ಅಲ್ಪ ಸಂಖ್ಯಾತ ಜಿಲ್ಲಾ ಅಧ್ಯಕ್ಷ ಜಾಯ್ಲೆಸ್ ಡಿ’ಸೋಜಾ, ಕ್ಷೇತ್ರಾಧ್ಯಕ್ಷ ಅಶ್ರಫ್ ಹರೇಕಳ, ಜಿಲ್ಲಾ ಉಪಾಧ್ಯಕ್ಷ ಉಸ್ಮಾನ್ ಬಂಟ್ವಾಳ, ಪ್ರ.ಕಾರ್ಯದರ್ಶಿಗಳಾದ ಮುನೀರ್ ಬಾವ, ಅಝೀರ್ ಫ್ಯಾನ್ಸಿ, ,ಮುಖಂಡರಾದ ಸಂಜೀವ ಶೆಟ್ಟಿ ಅಂಬ್ಲಮೊಗರು, ಬಾಬು ಬಂಗೇರ, ಲಲಿತಾ ಸುಂದರ್, ಯಶವಂತ ಅಮೀನ್, ಮಹಾಲಕ್ಷ್ಮಿ, ಭಗವಾನ್‌ದಾಸ್, ನಿತಿನ್ ಗಟ್ಟಿ ಕುರ್ನಾಡು, ಜಗದೀಶ್ ಆಲ್ವ ಕುವೆತ್ತ ಬೈಲು, ರಾಜೇಶ್ ಶೆಟ್ಟಿ ಪಜೀರು ರಮಣಿ ಸೋಮೇಶ್ವರ, ಮೋಹನ್ ರಾಜ್ ಕನೀರ್ ತೋಟ, ಮಹಮ್ಮದ್ ಅಸ್ಗರ್, ಸಚಿನ್ ಶೆಟ್ಟಿ ಸಾಂತ್ಯ, ಸುರೇಶ್ ಆಳ್ವ, ಇಸ್ಮಾಯಿಲ್ ಪೂಮಣ್ಣು, ಫಾರೂಕ್ ತಲಪಾಡಿ, ಪೊಡಿಮೋನು, ಆನಂದ ಶೆಟ್ಟಿ, ನಮಿತಾ ಶ್ಯಾಂ, ಮುನೀರ್ ಮಾಸ್ಟರ್, ಗೀತಾ ಬಾ, ಜೀವನ್ ತೊಕ್ಕೊಟ್ಟು, ಜಯಶ್ರೀ ಕರ್ಕೇರ, ಗೋಪಿನಾಥ್ ಬಗಂಬಿಲ, ಹರೀಶ್ ಅಂಬ್ಲಮೊಗರು ಅಜಿತ್ ತೊಕ್ಕೊಟ್ಟು, ಪ್ರಕಾಶ್ ಸಿಂಪೋನಿ, ಫಝಲ್ ಅಸೈಗೋಳಿ ಉಪಸ್ಥಿತರಿದ್ದರು. ಕ್ಷೇತ್ರ ಪ್ರ. ಕಾರ್ಯದರ್ಶಿ ಮೋಹನ್ ರಾಜ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News