ಮಂಗಳೂರು: ನಾಲ್ಕನೆ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ

Update: 2017-10-07 16:37 GMT

ಮಂಗಳೂರು, ಅ. 7: 9ನೆ ತರಗತಿಯ ವಿದ್ಯಾರ್ಥಿಯೋರ್ವ ಕಟ್ಟಡದ 4ನೆ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆಡು ಮರೋಳಿಯಲ್ಲಿ ಶನಿವಾರ ಸಂಜೆ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿಯನ್ನು ಆಡುಮರೋಳಿಯ ನಿವಾಸಿ ಪದ್ಮನಾಭ ಹಾಗೂ ವಿಶಾಲ ದಂಪತಿಯ ಪುತ್ರ ಕುಮಾರ್ ಪ್ರಥಮ್ (16) ಎಂದು ಗುರುತಿಸಲಾಗಿದೆ.

ಪದ್ಮನಾಭ ಅವರು ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರೆ, ಅವರ ಪತ್ನಿ ವಿಶಾಲ ಅವರು ದೂರಸಂಪರ್ಕ ಇಲಾಖೆಯ ಉದ್ಯೋಗಿಯಾಗಿ ದ್ದಾರೆ. ಮಂಗಳೂರು ನಗರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಪ್ರಥಮ್ ತನ್ನ ಮನೆಯ ಮುಂಭಾಗದಲ್ಲಿರುವ ಕಟ್ಟಡದ 4ನೆ ಮಹಡಿಯ ಟರೇಸ್‌ನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಂಭೀರ ಗಾಯಗೊಂಡ ಈತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿ ಕಟ್ಟಡದಿಂದ ಹಾರುವ ಮುನ್ನ ಚೀಟಿಯೊಂದನ್ನು ಬರೆದಿಟ್ಟಿದ್ದು, ಅದರಲ್ಲಿ ಕಲಿಕೆಯಲ್ಲಿನ ನಿರಾಸಕ್ತಿಯ ಬಗ್ಗೆ ಉಲ್ಲೇಖಿಸಿದ್ದಾನೆ. ಆತ ಚೇತರಿಸಿಕೊಂಡ ಬಳಿಕವಷ್ಟೇ ಸ್ಪಷ್ಟ ಮಾಹಿತಿ ದೊರೆಯಲು ಸಾಧ್ಯ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಲೂವೇಲ್ ವದಂತಿ

ವಿದ್ಯಾರ್ಥಿ ಆತ್ಮಹತ್ಯೆ ಯತ್ನಿಸಿದ ಘಟನೆಯ ಬಳಿಕ ಬ್ಲೂವೇಲ್ ಗೇಮ್‌ನಿಂದ ಪ್ರೇರಣೆಗೊಂಡು ಕಟ್ಟಡದಿಂದಾಗಿ ಹಾರಿದ್ದಾನೆಂಬ ವದಂತಿ ಹರಡಿತ್ತು. ವದಂತಿಯನ್ನು ನಿರಾಕರಿಸಿರುವ ಪೊಲೀಸರು ವಿದ್ಯಾರ್ಥಿ ಆತ್ಮಹತ್ಯೆಗೆ ಬ್ಲೂವೇಲ್ ಕಾರಣವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News