ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಉಲಮಾಗಳು ಸಕ್ರೀಯರಾಗಲಿ: ತ್ವಾಖಾ ಉಸ್ತಾದ್

Update: 2017-10-07 15:46 GMT

ಪುತ್ತೂರು, ಅ.7: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಉಲಮಾಗಳ ಪಾಲ್ಗೊಳ್ಳುವಿಕೆಯು ತೀರಾ ಕಡಿಮೆಯಾಗಿದ್ದು, ಇಸ್ಲಾಮಿನ ಈ ಬಗ್ಗೆ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಈ ಕೊರತೆಯನ್ನು ನೀಗಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದರು.

ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿಯಲ್ಲಿ ನಡೆದ ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ತ್ವಲಬಾ ಸಮಾವೇಶದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಳಯಾಲಂ ಸಾಹಿತ್ಯ ರಂಗದಲ್ಲಿ ಹಲವಾರು ಉಲಮಾಗಳು ಗುರುತಿಸಿಕೊಂಡಿದ್ದಾರೆ. ಆದರೆ ಕನ್ನಡ ಸಾಹಿತ್ಯ ಲೋಕದಲ್ಲಿ ಇಸ್ಲಾಮಿನ ಕುರಿತಾದ ಕೃತಿಗಳು ಕೊರತೆ ಎದ್ದು ಕಾಣುತ್ತಿದೆ. ಕರಾವಳಿ ಭಾಗದ ಉಲಮಾಗಳು ಮಲಯಾಲಂ ಸಾಹಿತ್ಯದ ಮೇಲೆ ಅವಲಂಭಿತರಾಗದೆ ಕನ್ನಡ ಸಾಹಿತ್ಯದ ಬಗ್ಗೆಯೂ ಆಸಕ್ತಿ ವಹಿಸಲಿ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಐಸಿ ಸಂಚಾಲಕ ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ ವಹಿಸಿದರು. ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಪ್ರಾಂಶುಪಾಲರಾದ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಮುಖ್ಯ ಭಾಷಣಗೈದರು.

ಕೆಂಪಿ ಮುಸ್ತಫಾ ಹಾಜಿ, ಮೂಸಾ ಶರೀಫ್ ಕುದ್ದುಪದವು, ಬಾಸಿತ್ ಹುದವಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದರು. ಮುಂಜಾನೆ ನಡೆದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಯ್ಯದ್ ಅನಸ್ ತಂಙಳ್ ಗಂಡಿಬಾಗಿಲು ವಹಿಸಿದ್ದರು. ನಂತರ ನಡೆದ ತರಬೇತಿ ಶಿಬಿರವನ್ನು ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಪ್ರ. ಕಾರ್ಯದರ್ಶಿ ಸತ್ತಾರ್ ಪಂದಲ್ಲೂರು, ಕರ್ನಾಟಕ ರಾಜ್ಯ ಎಸ್ಕೆಎಸ್ಸೆಸ್ಸೆಫ್‌ನ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಮಂಗಳೂರು ಕೇಂದ್ರ ಮಸೀದಿಯ ಖತೀಬ್ ಸದಕತುಲ್ಲಾ ಫೈಝಿ, ಅಶ್ರಫ್ ಪಾಝಿಲ್ ಬಾಖವಿ, ಅಬ್ದುಲ್ ರಹ್ಮಾನ್ ನದ್ವಿ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಎಸ್ಕೆಎಸ್ಸೆಫ್‌ನ ಅಧ್ಯಕ್ಷ ತಾಜುದ್ದೀನ್ ರಹ್ಮಾನಿ, ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಕೋಶಾಧಿಕಾರಿ ಜಾಬೀರ್ ಫೈಝಿ ಬನಾರಿ, ಸಿದ್ದೀಕ್ ಬಂಟ್ವಾಳ, ಉದಯ ಹನೀಫ್ ಕಲ್ಲೇಗ, ಕರೀಂ ದಾರಿಮಿ ಕುಂಬ್ರ, ಮುನೀರ್ ಬಾಖವಿ, ಸತ್ತಾರ್ ಕೌಸರಿ, ಇಬ್ರಾಹೀಂ ಹಾಜಿ ಬೊಳ್ಳಾಡಿ ಮತ್ತಿತ್ತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತ್ವಲಬಾ ವಿಂಗ್ ರಾಜ್ಯಾಧ್ಯಕ್ಷ ನಹೀಂ ಮುಕ್ವೆ ಸ್ವಾಗತಿಸಿ, ಸಾದಿಕ್ ಬಜೆಗುಂಡಿ ವಂದಿಸಿದರು. ರಿಯಾರ್ ಫೈಝಿ ಪಟ್ಟೆ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News