ಅ. 8: ಅಮೆಮಾರ್ ಮದ್ರಸದಲ್ಲಿ ಮುಅಲ್ಲಿಮ್ ಡೇ, ಮಜ್ಲಿಸುನ್ನೂರ್

Update: 2017-10-07 18:10 GMT

ಫರಂಗಿಪೇಟೆ, ಅ.7: ಎಸ್ಕೆ ಎಸ್ ಬಿ ವಿ, ಬದ್ರಿಯಾ ಮದರಸ ಅಮೆಮಾರ್ ಇದರ ಅಶ್ರಯದಲ್ಲಿ ಮುಅಲ್ಲಿಂ ಡೇ ಅಂಗವಾಗಿ ಹಾಗೂ ಮಜ್ಲಿಸುನ್ನೂರ್ ಮತ್ತು ಪ್ರಾರ್ಥನಾ ಸಂಗಮ ಹಾಗೂ ಸ್ವಚ್ಛತೆ, ಖಬರ್ ಝಿಯಾರತ್, ಸನ್ಮಾನ ಕಾರ್ಯಕ್ರಮವು ಅ.8ರಂದು ನಡೆಯಲಿದೆ.

 ಅಧ್ಯಕ್ಷತೆಯನ್ನು ಮಸೀದಿಯ ಅಧ್ಯಕ್ಷ ಹಾಜಿ ಉಮರಬ್ಬ ವಹಿಸಲ್ಲಿದ್ದು,  ಉದ್ಘಾಟನೆ ಹಾಗೂ ಮಜ್ಲಿಸುನ್ನೂರ್ ಗೆ ಸ್ಥಳೀಯ ಖತೀಬ್  ಅಬೂಸ್ವಾಲಿಹ್ ಪೈಝಿ ಅಕ್ಕರಂಗಡಿ ನೇತೃತ್ವ ನೀಡಲಿದ್ದಾರೆ.

ಸಭೆಯಲ್ಲಿ ಮಸೀದಿಯ ಕಾರ್ಯದರ್ಶಿ ಅಬೂಸ್ವಾಲಿಹ್ ಮುಸ್ಲಿಯಾರ್,  ಮುಹಿಯ್ಶದ್ದೀನ್ ಅಲ್ ಹಸನಿ, ಇಂಬ್ರಾನ್ ದಾರಿಮಿ, ಅಬೂಬಕರ್ ಮದನಿ, ದಾವೂದ್ ಅಝ್ಝರಿ, ಅದಂ ಮದನಿ ಹಾಗೂ ಇತರರು ಭಾಗವಹಿಸಲ್ಲಿದಾರೆಂದು ಎಸ್ಕೆ ಎಸ್ ಬಿ ವಿ ಚೆಯರ್ಮ್ಯಾನ್ ಇಸ್ಮಾಯಿಲ್ ಯಮಾನಿ ತಿಂಗಳಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News