ವಗ್ಗ: ಶಿಕ್ಷಕ ಆದಂ‌ ಸಾಹೇಬ್ ರಿಗೆ ಸನ್ಮಾನ

Update: 2017-10-08 06:02 GMT

ಬಂಟ್ವಾಳ, ಅ.8: ಕಾವಳಪಡೂರು ಗ್ರಾಮದ ವಗ್ಗ ಸರ್ಕಾರಿ ಫ್ರೌಢ ಶಾಲಾ ವಿಭಾಗದ ಪ್ರಭಾರ ಮುಖ್ಯೋಪಾಧ್ಯಾಯ, 2017-18ನೆ ಸಾಲಿನ ದ.ಕ. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ಶೇಖ್ ಆದಂ ಸಾಹೇಬ್ ಅವರನ್ನು ಬಿ.ಸಿ.ರೋಡ್ ನ ಜವಾನ್ ಫ್ರೆಂಡ್ಸ್ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು

ವಗ್ಗದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜವಾನ್ ಫ್ರೆಂಡ್ಸ್ ತಂಡದ ಸದಸ್ಯರಾದ ನೌಶಾದ್ ವಗ್ಗ, ಸತ್ತಾರ್ ನಂದರಬೆಟ್ಟು, ರಿಯಾಝ್ ಜವಾನ್, ನಝೀರ್ ಪರ್ಲಿಯಾ, ಆಶಿಕ್ ಕುಕ್ಕಾಜೆ ಹಾಗೂ ಸ್ಥಳೀಯರಾದ ವೆಲ್ ಸ್ಟನ್ ರೊಡ್ರಿಗಸ್, ಸುಶಾಂತ್ ಹಾಗೂ ಲಾಯ್ಸನ್ ರೊಡ್ರಿಗಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News