ಪುತ್ತೂರು: ವೃದ್ಧರನ್ನು ವಂಚಿಸಿ ಚಿನ್ನಾಭರಣ ಎಗರಿಸುತ್ತಿದ್ದ ಆರೋಪಿಯ ಸೆರೆ

Update: 2017-10-08 10:29 GMT

ಪುತ್ತೂರು, ಅ.8: ಮಾತಿನ ಮೋಡಿಯಿಂದ ವೃದ್ಧರನ್ನು ವಂಚನೆ ನಡೆಸಿ ಚಿನ್ನಾಭರಣ ಎಗರಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಇಂದು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 1.70 ಲಕ್ಷ ರೂ.ವೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಮರಾಠಿಮೂಲೆ ನಿವಾಸಿ ಸುರೇಶ್ ನಾಯ್ಕ(51) ಬಂಧಿತ ಆರೋಪಿ. ಪುತ್ತೂರು ಹಾಗೂ ಉಪ್ಪಿನಂಗಡಿ ಬಸ್ಸು ನಿಲ್ದಾಣಗಳಲ್ಲಿ ಚಿನ್ನದ ಒಡವೆಗಳನ್ನು ದೋಚಿದ 3 ಪ್ರಕರಣಕ್ಕೆ ಸಂಬಂಧಿಸಿ ಸುರೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ವೃದ್ಧರನ್ನೇ ಗುರಿಯಾಗಿರಿಸಿ ಅವರೊಂದಿಗೆ ಪರಿಚಯಸ್ಥನಂತೆ ನಟಿಸಿ, ನಂಬಿಕೆ ಹುಟ್ಟಿಸಿ ಬಳಿಕ ಅವರಿಂದ ಬೆಲೆ ಬಾಳುವ ಸೊತ್ತುಗಳನ್ನು ಎಗರಿಸುತ್ತಿದ್ದನೆನ್ನಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಎಸ್ಪಿಸುಧೀರ್ ಕುಮಾರ್ ಮತ್ತು ಡಿವೈಎಸ್ಪಿಶ್ರೀನಿವಾಸ್ ಹಾಗೂ ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್‌ರ ಮಾರ್ಗದರ್ಶನದಂತೆ ಕ್ರೈಂ ಎಸ್ಸೈ ವೆಂಕಟೇಶ್ ಭಟ್ ಅವರ ನೇತೃತ್ವದಲ್ಲಿ ಪ್ರೊಬೆಷನರಿ ಎಸ್ಸೈ ರವಿ, ಎಎಸ್ಸೈ ಚಿದಾನಂದ್, ಹೆಡ್ ಕಾನ್‌ಸ್ಟೇಬಲ್‌ಗಳಾದ ಸ್ಕರಿಯ, ಪ್ರಸನ್ನ, ಮಂಜುನಾಥ, ಪ್ರಶಾಂತ್ ರೈ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News