3ಕೋಟಿ ವೆಚ್ಚದಲ್ಲಿ ಕೊರಗ ಸಮುದಾಯ ಭವನ ನಿರ್ಮಾಣ: ಪ್ರಮೋದ್

Update: 2017-10-08 12:29 GMT

ಉಡುಪಿ, ಅ.8: ಉಡುಪಿ ಜಿಲ್ಲೆಯ ಕೊರಗರಿಗಾಗಿ ಮಂಚಿ ಕುಮೇರಿಯ ಒಂದು ಎಕರೆ ಜಾಗದಲ್ಲಿ ಮೂರು ಕೋಟಿ ರೂ. ವೆಚ್ಚದಲ್ಲಿ ಕೊರಗ ಸಮು ದಾಯ ಭವನವನ್ನು ನಿರ್ಮಿಸಲಾಗುವುದು ಎಂದು ರಾಜ್ಯ ಮೀನುಗಾರಿಕೆ ಯುವಜನ ಸಬಲೀಕರಣ ಹಾಗೂ ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಉಡುಪಿ ನಗರಸಭೆ ಮತ್ತು ಐಟಿಡಿಪಿ ಇಲಾಖೆಯ ವತಿಯಿಂದ 40ಲಕ್ಷ ರೂ. ಅನುದಾನದಲ್ಲಿ ಇಂದ್ರಾಳಿಯಲ್ಲಿ ನೂತನವಾಗಿ ನಿರ್ಮಿಸಲಾದ ಅಂಬೇಡ್ಕರ್ ಸಮುದಾಯ ಭವನವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ತುಳುನಾಡುವಿನ ಮೂಲನಿವಾಸಿಗಳಾದ ಕೊರಗರು ಹಿಂದೆ ತುಳು ರಾಜ್ಯ ವನ್ನು ಆಳುತ್ತಿದ್ದರು. ಕಾಲಕ್ರಮೇಣ ತುಳುರಾಜ್ಯದ ಮೇಲೆ ನಡೆದ ದಾಳಿಯಿಂದ ಕೊರಗ ಸಮುದಾಯ ದಿಕ್ಕಿಲ್ಲದೇ ಕಾಡಿನಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣ ವಾಗಿ ಮೂಲೆಗೆ ತಳಲ್ಪಟ್ಟಿತು. ಇಂದು ಸಮಾಜದಲ್ಲಿರುವ ಬೇರೆ ಬೇರೆ ಜಾತಿಗಳ ಪೈಕಿ ಅತ್ಯಂತ ಹಿಂದುಳಿದ ಸಮಾಜ ಅಂದರೆ ಅದು ಕೊರಗ ಸಮಾಜ ಎಂದು ಸಚಿವರು ಖೇದ ವ್ಯಕ್ತಪಡಿಸಿದರು.

ಕೊರಗಸಮುದಾಯದ ಜನಸ್ಯಂಖೆ ದಿನೇ ದಿನೇ ಕಡಿಮೆಯಾಗುತ್ತಿದೆ. 16 ಸಾವಿರ ಜನಸ್ಯಂಖೆ ಹೊಂದಿದ್ದ ಕೊರಗ ಸಮುದಾಯ ಈಗ 11 ಸಾವಿರಕ್ಕೆ ಇಳಿಕೆ ಯಾಗಿದೆ. ಕೊರಗ ಸಮುದಾಯವನ್ನು ರಕ್ಷಿಸುವ ಜವಾಬ್ದಾರಿ ಕೇವಲ ಸರಕಾರದ್ದು ಮಾತ್ರವಲ್ಲ ಸರ್ವ ಸಮಾಜ ಜವಾಬ್ದಾರಿಯಾಗಿದೆ. ಹಾಗಾಗಿ ಕೊರಗ ಸಮುದಾಯಕ್ಕೆ ನಿಡುವ ಸರಕಾರಿ ಸವಲತ್ತುಗಳ ಬಗ್ಗೆ ಯಾರು ಕೂಡ ಅಸೂಯೆಪಡಬಾರದು ಎಂದರು.

ಕೊರಗ ಸಮುದಾಯದ ಉದ್ಯೋಗ ಇಲ್ಲದ ಯುವಕರಿಗೆ ನಿರೋದ್ಯೋಗಿ ಭತ್ಯೆಯನ್ನು ರಾಜ್ಯ ಸರಕಾರ ನೀಡುತ್ತಿದೆ. ಐಟಿಡಿಪಿ ಇಲಾಖೆಯ ವತಿಯಿಂದ ಬೀಡಿನಗುಡ್ಡೆಯಲ್ಲಿ ಕೊರಗ ಮತ್ತು ಮರಾಠಿ ಸಮುದಾಯದ ವಿದ್ಯಾರ್ಥಿಗಳಿಗೆ ವಸತಿ ನಿಲಯವನ್ನು ನಿರ್ಮಿಸಲಾಗುವುದು. ಇದರ ಶಿಲಾನ್ಯಾಸ ಕಾರ್ಯ ಕ್ರಮವು ಅ.15ರಂದು ನೆರವೇರಿಸಲಾಗುವುದು ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ವಹಿಸಿದ್ದರು. ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಸದಸ್ಯರಾದ ವಿಜಯ ಮಂಚಿ, ರಮೇಶ್ ಕಾಂಚನ್, ಯುವರಾಜ್, ಲತಾ ಶೇರಿಗಾರ್, ನಾರಾಯಣ ಕುಂದರ್, ಶಾಂತಾರಾಮ ಸಾಲ್ವಂಕರ್, ಗಣೇಶ್ ನೆರ್ಗಿ, ಜನಾರ್ದನ ಭಂಡಾರ್ಕರ್, ಜಿಲ್ಲಾ ಕೊರಗ ಸಮುದಾಯದ ಅಧ್ಯಕ್ಷ ಕೆ.ರವಿ, ಐಟಿಡಿಪಿ ಇಲಾಖೆಯ ವಿಶ್ವನಾಥ ಮೊದಲಾದವರು ಉಪಸ್ಥಿತರಿದ್ದರು.

ಕುಶಲ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭೆ ಪೌರಾಯುಕ್ತ ಡಿ.ಮಂಜುನಾಥಯ್ಯ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News