ಪಕ್ಕಲಡ್ಕ: ಮುಅಲ್ಲಿಂ ಡೇ ಕಾರ್ಯಕ್ರಮ

Update: 2017-10-08 12:37 GMT

ಪಕ್ಕಲಡ್ಕ, ಅ. 8: ಮುಹಿಯುದ್ದೀನ್ ಮದ್ರಸ ಪಕ್ಕಲಡ್ಕದಲ್ಲಿ ಅಧ್ಯಾಪಕ ಒಕ್ಕೂಟ ಮತ್ತು ಎಸ್ ಕೆ ಎಸ್ ಬಿ ವಿ ವತಿಯಿಂದ ಮುಅಲ್ಲಿಂ ಡೇ ಕಾರ್ಯಕ್ರಮ ಜಮಾಅತ್ ಆಡಳಿತ ಸಮಿತಿ ಸದಸ್ಯ ನಿಯಾಝ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜುನೈದ್ ಕಿರಾಅತ್ ಪಠಿಸಿದರು. ಸದರ್ ಮುಅಲ್ಲಿಂ ಅನ್ವರ್ ಅಝ್ಹರಿ ಸ್ವಾಗತಿಸಿ, ಮುಅಲ್ಲಿಮರ ಸೇವೆಗಳ ಬಗ್ಗೆ ವಿವರಿಸಿದರು. ಈಸಾಕೋಯ ತಂಙಳ್ ಸಭೆಯನ್ನು ಉಧ್ಘಾಟಿಸಿದರು.ಇಬ್ರಾಹಿಂ ಮುಸ್ಲಿಯಾರ್ ದುವಾ ನೆರವೇರಿಸಿದರು.

ಮುಖ್ಯ ಪ್ರಭಾಷಣ ಮಾಡಿದ ಸ್ಥಳೀಯ ಖತೀಬ್ ನಝೀರ್ ಅಝ್ಹರಿ ಅವರು ವಿದ್ಯಾರ್ಥಿಗಳಲ್ಲಿ ಶಾಂತಿ ಸೌಹಾರ್ದತೆಯ ಸಂದೇಶಗಳನ್ನು  ಭೋದಿಸಿ ಆತ್ಮಶುದ್ಧಿ ಕರಣ ಮಾಡಿ ಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡುವ ಮುಅಲ್ಲಿಂ ಸಮೂಹದ ಸೇವೆಯೂ ಪ್ರಶಂಸನೀಯ ಮತ್ತು ಅವರ ಸೇವೆಗೆ ಸರಿಸಾಟಿಯಾದ ಬೇರೊಂದು ಸೇವೆಯೂ ಕಾಣಲಸಾಧ್ಯ ಎಂದರು. ಮರಣ ಹೊಂದಿದವರಿಗಾಗಿ ದುವಾ ಮಾಡಿದ ನಂತರ ಮದ್ರಸ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯ ಕ್ರಮಗಳು ನಡೆಯಿತು. ಕೊನೆಗೆ ವಿದ್ಯಾರ್ಥಿಗಳಿಂದ  ಮುಅಲ್ಲಿಂ ಡೇ ಪ್ರಯುಕ್ತ ಮದ್ರಸ ಪರಿಸರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.  ಇಬ್ರಾಹಿಂ ಮುಅದ್ದೀನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News