ಎಸ್ಸೆಸ್ಸೆಫ್ ಬಂಟ್ವಾಳ ಘಟಕ: ರಕ್ತದಾನ ಶಿಬಿರ

Update: 2017-10-08 15:54 GMT

ಬಂಟ್ವಾಳ, ಅ. 8: ಎಸ್ಸೆಸ್ಸೆಫ್ ಬಂಟ್ವಾಳ ಘಟಕ, ಇಂಡಿಯನ್‌ ರೆಡ್ ಕ್ರಾಸ್ ಸೊಸೈಟಿ ಹಾಗೂ ಮಂಗಳೂರು ಲೇಡಿಗೋಶನ್ ಆಸ್ಪತ್ರೆ ಇದರ ಸಹ ಭಾಗಿತ್ವದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ಬಿ.ಸಿ.ರೋಡಿನ ಎಸ್ಸೆಸ್ಸೆಫ್ ಜಿಲ್ಲಾ ಕಚೇರಿಯಲ್ಲಿ ರವಿವಾರ ನಡೆಯಿತು.

ಎಸ್ಸೆಸ್ಸೆಫ್ ಬಂಟ್ವಾಳ ಘಟಕದ ಅಧ್ಯಕ್ಷ ವಿ. ಅಬ್ದುರ್ರಶೀದ್ ವಗ್ಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್‌ವೈಎಸ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ಬಂಟ್ವಾಳ ಘಟಕದ ಪ್ರಧಾನ ಎಸ್ಸೆಸ್ಸೆಫ್  ಜಿಲ್ಲಾಧ್ಯಕ್ಷ  ಕೆ.ಪಿ. ಸಿರಾಜು ದ್ದೀನ್ ಸಖಾಫಿ ಕನ್ಯಾನ ಸಂದೇಶ ಭಾಷಣ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ತಹಶೀಲ್ದಾರ್ ಪುರಂದರ ಹೆಗ್ಡೆ, ವಲಯ ಅರಣ್ಯಾಧಿಕಾರಿ ಬಿ.ಸುರೇಶ್, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪುರಸಭಾ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಕೆಸ್ಸಾರ್ಟಿಸಿ ಬಿ.ಸಿ.ರೋಡ್ ಘಟಕದ ವ್ಯವಸ್ಥಾಪಕ ಇಸ್ಮಾಯಿಲ್ ನಾವೂರು, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಸಜಿಪಮೂಡ ಕಾಲೇಜಿನ ಕಾರ್ಯಾಧ್ಯಕ್ಷ ಕೆ.ಪ್ರಭಾಕರ್ ಶೆಟ್ಟಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ರೆಡ್‌ಕ್ರಾಸ್‌ನ ಎಡ್ವರ್ಡ್, ಯುವ ಕಾಂಗ್ರೆಸ್‌ನ ಉಪಾಧ್ಯಕ್ಷ ಉಕ್ಮಾನ್ ಬಿ.ಸಿ.ರೋಡ್ ಹಾಗೂ ಎಸ್ಸೆಸ್ಸೆಫ್‌ನ ಮುಖಂಡರಾದ ಅಬ್ದುಲ್ಲಾ ಕೊಳಕೆ, ಇಬ್ರಾಹಿಂ ಸಖಾಫಿ ಸೆರ್ಕಳ, ಶರೀಫ್ ನಂದಾವರ, ಅಕ್ಬರ್ ಅಲಿ ಮದನಿ ಆಲಂಪಾಡಿ, ಅಲಿ ಮದನಿ ಸೆರ್ಕಳ, ಮನ್ಸೂರ್ ಅಹ್ಮದ್, ಇಬ್ರಾಹಿಂ ಕರೀಂ ಕದ್ಕಾರ್, ಸ್ವಾದಿಕ್ ಕಟ್ಟತ್ತಿಲ, ಮೌಸೂಫ್ ಅಬ್ದುಲ್ಲ ಮೆಲ್ಕಾರ್, ರಫೀಕ್ ಝಹ್‌ರಿ ಮತ್ತಿತರರು ಇದ್ದರು.

ಕಾರ್ಯದರ್ಶಿ ಝೈನುಲ್ ಆಬಿದೀನ್ ನಈಮಿ ಸ್ವಾಗತಿಸಿ, ಎಸ್ಸೆಸ್ಸೆಫ್ ಬಂಟ್ವಾಳ ಘಟಕದ ಕಾರ್ಯದರ್ಶಿ ಇರ್ಷಾದ್ ಗೂಡಿನಬಳಿ ವಂದಿಸಿದರು. ಶಿಬಿರದ ಮುಕ್ತಾಯ ಹಂತಕ್ಕೆ ಸುಮಾರು 89 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News