ಅ.12ರಿಂದ ಆರ್ಟ್‌ಆಫ್ ಲಿವಿಂಗ್ ಸಂಸ್ಥೆಯಿಂದ ಪುತ್ತೂರಿನಲ್ಲಿ ಯೋಗ ಶಿಬಿರ

Update: 2017-10-09 14:12 GMT

ಪುತ್ತೂರು, ಅ. 9: ರವಿಶಂಕರ ಗುರೂಜಿಯವರಿಂದ ಸ್ಥಾಪಿತವಾದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಅ.12ರಿಂದ 14ರ ತನಕ ಸುದಾನ ವಸತಿ ಶಾಲೆಯಲ್ಲಿ ಶಿಕ್ಷಕರಿಗಾಗಿ ಮತ್ತು ಪೋಷಕರಿಗಾಗಿ, ಅ.14ರಿಂದ 16ರ ವರೆಗೆ ಪುತ್ತೂರಿನ ಜೈನ ಬಸದಿಯಲ್ಲಿ 18 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ 'ಹ್ಯಾಪಿನೆಸ್ ಪ್ರೋಗ್ರಾಂ' ಮತ್ತು ಅ.18ರಿಂದ 21ರ ವರೆಗೆ 13ರಿಂದ 18 ವರ್ಷದೊಳಗಿನವರಿಗಾಗಿ 'ಮೇಧಾ ಯೋಗ' ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ತಾಲ್ಲೂಕು ಕಾರ್ಯಕರ್ತೆ ಶರಾವತಿ ಅವರು ತಿಳಿಸಿದರು.

ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿಬಿರದಲ್ಲಿ ದೈಹಿಕ ಸುಸ್ಥಿತಿಗಾಗಿ ಸರಳ ವ್ಯಾಯಾಮಗಳು, ಮನಸ್ಸಿನ ಸುಸ್ಥಿತಿಗಾಗಿ ಪ್ರಾಣಾಯಾಮ, ಧ್ಯಾನ, ಸುದರ್ಶನ ಕ್ರಿಯೆ, ಕೌಶಲ್ಯ ವಿಕಾಸಕ್ಕಾಗಿ ಚಟುವಟಿಕೆಗಳು, ಜ್ಞಾನಾಧಾರಿತ ವಿಚಾರಗಳ ಸಂವಹನ , ಯುವ ಜನತೆಗೆ ಆಟ, ಬೌದ್ಧಿಕ ಚುರುಕುತನದ ಚಟುವಟಿಕೆಗಳನ್ನು ಶಿಬಿರದಲ್ಲಿ ಆಳವಡಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪುತ್ತೂರು ವಿಭಾಗದ ಮುಖ್ಯಸ್ಥ ಕುಮಾರ ಸುಬ್ರಹ್ಮಣ್ಯ ಅವರು ಮಾತನಾಡಿ ಹ್ಯಾಪಿನೆಸ್ ಪ್ರೋಗ್ರಾಂ ಮತ್ತು ಮೇಧಾ ಯೋಗವು ಏಕಾಗ್ರತೆ, ಸ್ಮರಣಶಕ್ತಿ, ಸೃಜನಶೀಲತೆ, ಶಾಂತಚಿತ್ತ, ಸ್ವ-ಸಾಮರ್ಥ್ಯ, ಸುಮಧುರ ಬಾಂಧವ್ಯ , ಧನಾತ್ಮಕ ಚಿಂತನೆಗಳ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು. ಸಂಸ್ಥೆಯ ಶಿಕ್ಷಕಿ ಸುಧಾ ಹೆಬ್ಬಾರ್, ಶಿಕ್ಷಕ ಪ್ರಶಾಂತ್ ಪೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News