​ಭ್ರಷ್ಟಾಚಾರ ನಿರ್ಮೂಲನ ಅರಿವು ಕಾರ್ಯಕ್ರಮ

Update: 2017-10-09 14:35 GMT

ಉಡುಪಿ, ಅ.9: ಉಡುಪಿಯ ಮಾನವ ಹಕ್ಕುಗಳ ಸಂಘ, ಅಜ್ಜರಕಾಡು ಸರಕಾರಿ ಮಹಿಳಾ ಕಾಲೇಜು ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಜಂಟಿ ಆಶ್ರಯದಲ್ಲಿ ಭ್ರಷ್ಟಾಚಾರ ನಿರ್ಮೂಲನ ಅರಿವು ಕಾರ್ಯಕ್ರಮವು ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು.

ಉಡುಪಿಯ ಭ್ರಷ್ಟಾಚಾರ ನಿಗ್ರಹ ದಳ ಠಾಣೆಯ ಡಿವೈಎಸ್ಪಿ ದಿನಕರ ಶೆಟ್ಟಿ ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರಕ್ಕೆ ಕಾರಣ ಮತ್ತು ಅದರ ವಿವಿಧ ಮುಖಗಳ ಬಗ್ಗೆ ಮಾಹಿತಿ ನೀಡಿದರು. ಭ್ರಷ್ಟಾಚಾರ ನಿಗ್ರಹದಳ ಠಾಣೆಯ ಪೋಲಿಸ್ ನಿರೀಕ್ಷಕ ರಾದ ಜಯರಾಂ ಡಿ. ಗೌಡ ಮತ್ತು ಸತೀಶ್ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ನೀಡಿದರು. ನಂತರ ಸಂವಾದ ಕಾರ್ಯಕ್ರಮ ನಡೆಯಿತು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಜಗದೀಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಮಾನವ ಹಕ್ಕುಗಳ ಸಂಘದ ಸಂಚಾಲಕ ಎನ್.ನಿತ್ಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಅಶೋಕ್ ಭಂಡಾರಿ ವಂದಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕಿ ಯೋಗಿತ ಕಾರ್ಯಕ್ರಮ ನಿರೂಪಿಸಿ ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News