​ಮನೆಯ ಮೇಲೆ ಬಿದ್ದ ಅಕ್ರಮ ಮರಳು ಸಾಗಾಟದ ಲಾರಿ

Update: 2017-10-10 12:29 GMT

ಕಾಸರಗೋಡು,ಅ.10 : ಪೊಲೀಸರನ್ನು  ಕಂಡು  ಒಳದಾರಿಯಾಗಿ ಪರಾರಿಯಾಗಲೆತ್ನಿಸಿದ  ಅಕ್ರಮ ಮರಳು ಸಾಗಾಟದ ಲಾರಿ  ಚಾಲಕನ ನಿಯಂತ್ರಣ ತಪ್ಪಿ ಮನೆಯ ಮೇಲೆ ಮಗುಚಿದ ಘಟನೆ ಮಂಗಳವಾರ ಬೆಳಗ್ಗೆ  ನಗರದ ಪಿಲಿಕುಂಜೆ -ಅಮೈ ರಸ್ತೆಯಲ್ಲಿ  ನಡೆದಿದ್ದು, ಮನೆಯಲ್ಲಿದ್ದವರು ಅದ್ರಷ್ಟವಷಾತ್  ಅಪಾಯದಿಂದ ಪಾರಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ  ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಮರಳು ಹೇರಿಕೊಂಡು ಬರುತ್ತಿದ್ದ ಟೋರಸ್ ಲಾರಿಯನ್ನು ಪೊಲೀಸರು ನಿಲ್ಲಿಸಲು ಸೂಚನೆ ನೀಡಿದರೂ ತಪ್ಪಿಸಿ ತೆರಳಿದ್ದು, ಪೊಲೀಸರು ಲಾರಿಯನ್ನು ಬೆನ್ನಟ್ಟಿದಾಗ ಒಳರಸ್ತೆಯಾಗಿ ಸಾಗಿತು.

ಪರಾರಿಯಾಗುವ ಯತ್ನದಲ್ಲಿ  ಪಿಲಿಕುಂಜೆ - ಅಮೈ ರಸ್ತೆಯಲ್ಲಿ ಸುಗಂಧಿ ಎಂಬವರ ಮನೆ ಮೇಲೆ ಮಗುಚಿ  ಬಿದ್ದಿದೆ.ಲಾರಿಯಲ್ಲಿದ್ದವರು ಪರಾರಿಯಾಗಿದ್ದಾರೆ.
ಮನೆಗೆ ಹಾನಿ ಉಂಟಾಗಿದೆ. ಕಾಸರಗೋಡು ನಗರ ಠಾಣಾ ಪೊಲೀಸರು ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದು , ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News