ತುಳುನಾಡ ರಕ್ಷಣಾ ವೇದಿಕೆ: ನೂತನ ಪದಾಧಿಕಾರಿಗಳ ಆಯ್ಕೆ

Update: 2017-10-10 14:14 GMT

 ಬಂಟ್ವಾಳ, ಅ. 10: ತುಳುನಾಡ ರಕ್ಷಣಾ ವೇದಿಕೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಪುಂಜಾಲಕಟ್ಟೆ ನಂದಗೋಕುಲ ಸಭಾಂಗಣದಲ್ಲಿ ಜರಗಿತು.

ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಕಾರ್ಯಕ್ರಮ ಉದ್ಘಾಟಿಸಿದರು. ಕೇಂದ್ರೀಯ ಮಹಿಳಾ ಘಟಕ ಕಾರ್ಯದರ್ಶಿ ಜ್ಯೋತಿಕಾ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಟನೆಯ ಮೂಲಕ ಉತ್ತಮ ಕಾರ್ಯಗಳನ್ನು ನಡೆಸಿಕೊಂಡು ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕು. ಇದರಿಂದ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬಹುದು ಎಂದು ಹೇಳಿದರು.

ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಸಮಿತಿ ಕೋಶಾಧಿಕಾರಿ ಅಬ್ದುಲ್ ರಶೀದ್ ಜಪ್ಪು, ಸಂಘಟನಾ ಕಾರ್ಯದರ್ಶಿ ಆನಂದ ಅಮೀನ್ ಅಡ್ಯಾರ್, ಯುವ ಘಟಕ ಜಿಲ್ಲಾಧ್ಯಕ್ಷ ಹರೀಶ್ ಶೆಟ್ಟಿ ಶಕ್ತಿನಗರ, ನೂತನ ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ, ಉಪಸ್ಥಿತರಿದ್ದರು. ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಯುವ ಘಟಕದ ಅಧ್ಯಕ್ಷ ಚಿರಂಜೀವಿ ಶೆಟ್ಟಿ ಕುಂಡೋಳಿ ವಂದಿಸಿದರು. ರಂಗ ಕಲಾವಿದ ಎಚ್ಕೇ ನಯನಾಡು ಕಾರ್ಯಕ್ರಮ ನಿರೂಪಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ:
ಬಂಟ್ವಾಳ ಘಟಕ: ಅಧ್ಯಕ್ಷರಾಗಿ ರಮೇಶ್ ಶೆಟ್ಟಿ ಮಜಲೋಡಿ, ಕಾಯದರ್ಶಿಯಾಗಿ ಜಯರಾಜ್ ಅತ್ತಾಜೆ, ಜೊತೆ ಕಾರ್ಯದರ್ಶಿಯಾಗಿ ಚಂದ್ರಹಾಸ ನೂರ್ತಾಡಿ, ಗೌರವ ಸಲಹೆಗಾರರಾಗಿ ಎಚ್ಕೆ ನಯನಾಡು, ಉದಯ ಕುಮಾರ್ ಶೆಟ್ಟಿ. 

ಪುಂಜಾಲಕಟ್ಟೆ ಘಟಕ: ಅಧ್ಯಕ್ಷರಾಗಿ ಗಿರೀಶ್ ಮೂಲ್ಯ ಅನಿಲಡೆ, ಗೌರವಾಧ್ಯಕ್ಷರಾಗಿ ದಿನಕರ ಶೆಟ್ಟಿ ಅಂಕದಳ,  ಉಪಾಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ ಕುರ್ಡುಮೆ, ಕಾರ್ಯದರ್ಶಿಯಾಗಿ ಸಂತೋಷ್ ಮೂರ್ಜೆ, ಉಪಕಾರ್ಯದರ್ಶಿಯಾಗಿ ಮೇಧಾವಿ ಪಾರೆಂಕಿ, ಕೋಶಾಧಿಕಾರಿಯಾಗಿ ಹರೀಶ್ಚಂದ್ರ ಶೆಟ್ಟಿಗಾರ್, ಯುವ ಘಟಕ ಅಧ್ಯಕ್ಷರಾಗಿ ಚಿರಂಜೀವಿ ಶೆಟ್ಟಿ, ಗೌರವ ಸಲಹೆಗಾರರಾಗಿ ರಮೇಶ್ ಮೂಲ್ಯ, ಪದ್ಮನಾಭ ಕೋಂಕಡ್ಡ, ಕಾರ್ಮಿಕ ಘಟಕ ಅಧ್ಯಕ್ಷ ರಾಗಿ ಅಶೋಕ್ ಕುಮಾರ್.

ಇರ್ವತ್ತೂರು ಘಟಕ: ಅಧ್ಯಕ್ಷರಾಗಿ ಗಣೇಶ್ ಶೆಟ್ಟಿ ನರ್ವಲ್ದಡ್ಡ, ಉಪಾಧ್ಯಕ್ಷ ರವಿಚಂದ್ರ ಪಾಂಗಲ್ಪಾಡಿ, ಕಾರ್ಯದರ್ಶಿಯಾಗಿ ವಸಂತ ಶೆಟ್ಟಿ ಬೈಲೊರ್ದು, ಉಪ ಕಾರ್ಯದರ್ಶಿಯಾಗಿ ಸತೀಶ್ ಮಜಲು, ಕೋಶಾಧಿಕಾರಿಯಾಗಿ ಸತೀಶ್ ಕಯ್ಯಬೆ. ವಾಮದಪದವು ಘಟಕ: ಅಧ್ಯಕ್ಷರಾಗಿ ದೇವಿ ಪ್ರಸಾದ್ ಶೆಟ್ಟಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News