ಸರ್ಪನಕಟ್ಟೆ ಹಾಗೂ ಸೋಡಿಗದ್ದೆ ಕ್ರಾಸ್ ನಲ್ಲಿ ಬಸ್ ನಿಲುಗಡೆಗೆ ಎಬಿವಿಪಿ ಭಟ್ಕಳ ಆಗ್ರಹ

Update: 2017-10-10 14:57 GMT

ಭಟ್ಕಳ,ಅ.10: ಭಟ್ಕಳ ತಾಲ್ಲೂಕಿನ ಸರ್ಪನಕಟ್ಟೆ,ಸೋಡಿಗದ್ದೆ ಮುಂತಾದ ಪ್ರದೇಶದಿಂದ ದಿನಂಪ್ರತಿ ನೂರಾರು ವಿದ್ಯಾರ್ಥಿಗಳು ಭಟ್ಕಳ ಹಾಗೂ ಬೈಂದೂರು ಕಾಲೇಜಿಗೆ ಶಿಕ್ಷಣ ಪಡೆಯಲು ಹೋಗುತ್ತಿದ್ದಾರೆ. ಆದರೆ ಭಟ್ಕಳ-ಕುಂದಾಪುರ ಬಸ್ಸಿನಲ್ಲಿ ಸರ್ಪನಕಟ್ಟೆ,ಸೋಡಿಗದ್ದೆ ಕ್ರಾಸ್ ನಲ್ಲಿ ನಿಂತಿರುವ ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯ್ಯಲು ನಿರಾಕರಿಸುತ್ತಾರೆ. 

ವಿದ್ಯಾರ್ಥಿಗಳು ಬಸ್ ಪಾಸ್ ಹೊಂದಿದ್ದು, ಭಟ್ಕಳ-ಕುಂದಾಪುರ ಬಸ್ಸಿನವರು ವಿದ್ಯಾರ್ಥಿಗಳನ್ನು ಕರೆದೊಯ್ಯಲು ನಿರಾಕರಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಬಸ್ಸಿನವರು ವಿದ್ಯಾರ್ಥಿಗಳನ್ನು ಬಿಟ್ಟು ಹೋಗುವುದರಿಂದ ಬೇರೆ ಬಸ್ಸು ಹಾಗೂ ಟೆಂಪೋಗೆ ಕಾಯುವಂತಾಗಿ ಕಾಲೇಜಿಗೆ ಸಮಯಕ್ಕೆ ಸರಿಯಾಗಿ ಬರಲು ಆಗುತ್ತಿಲ್ಲ.

 ಈ ಮಾರ್ಗದಲ್ಲಿ ಭಟ್ಕಳದಿಂದ ಕುಂದಾಪುರ ಹಾಗೂ ಕುಂದಾಪುರದಿಂದ ಭಟ್ಕಳಕ್ಕೆ ಸಾರಿಗೆ ಸಂಸ್ಥೆಯ ಸಾಕಷ್ಟು ಬಸ್ಸುಗಳು ಸಂಚರಿಸುವುದರಿಂದ ವಿದ್ಯಾರ್ಥಿಗಳನ್ನು ಈ ಬಸ್ಸಿನಲ್ಲಿ ಕರೆದೊಯ್ಯಲು ತಾವು ಅನುವು ಮಾಡಿಕೊಡಬೇಕು, ಎಂದು ಎಬಿವಿಪಿ ಭಟ್ಕಳ ವತಿಯಿಂದ ಬಸ್ ಡಿಪೋ ಮ್ಯಾನೇಜರ್ ವೈ.ಕೆ.ಬನಾವಳಿಕರ್ ರವರಿಗೆ ಮನವಿ ಸಲ್ಲಿಸಲಾಯಿತು. 

ಮನವಿ ಸ್ವೀಕರಿಸಿ, ಮಾತನಾಡಿದ ಅವರು ಆದಷ್ಟು ಬೇಗನೆ ಈ ಕುರಿತಾಗಿ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಬಿವಿಪಿ ಪ್ರಮುಖರಾದ ಲೋಕೇಶ್ ದೇವಾಡಿಗ, ದಿವಾಕರ ನಾಯ್ಕ,ಮಹೇಶ್ ಸರ್ಪನಕಟ್ಟೆ, ಸದಾನಂದ ಬೆಳಕೆ,ನಿತೇಶ್ ಶಿರಾಲಿ ಹಾಗೂ ಲೋಕೇಶ್ ಮಂಕಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News